ಕರ್ನಾಟಕ ರಾಜ್ಯ ಸಿಬ್ಬಂದಿ ಆಯೋಗ (SSC KKR) 2024 ರ KKR ಪ್ರಾದೇಶಿಕ ಕೇಂದ್ರದ (KKR) SSC CHSL 2024 ಅರ್ಜಿ ಸ್ಥಿತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕ ಮತ್ತು ಕೇರಳ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಇದೀಗ ಪರಿಶೀಲಿಸಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಆನ್ಲೈನ್ ಮೂಲಕ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಲಾಗಿನ್ ಮಾಡುವ ಮೂಲಕ ನಿಮ್ಮ ಅರ್ಜಿವು ಅಂಗೀಕರಿಸಿದರೆ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತೀರಾ. ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಅಲ್ಲಿ ಪರೀಕ್ಷೆಯ ಸಮಯ ಮತ್ತು ದಿನಾಂಕದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ನಾವು ಈ ಲೇಖನದಲ್ಲಿ SSC CHSL ಪರೀಕ್ಷೆಗೆ ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.