SSC CHSL Answer Key 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2024 ರ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) Tier-1 ಪರೀಕ್ಷೆಯ ಕೀ ಉತ್ತರಗಳನ್ನು ಇಂದು (ಜುಲೈ 18)ರಂದು ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಜುಲೈ 1 ರಿಂದ 11 ರವರೆಗೆ ಆನ್‌ಲೈನ್ ಮೂಲಕ ನಡೆಸಲಾಗಿತ್ತು.
ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರಗಳನ್ನು ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕೀ ಉತ್ತರಗಳನ್ನು SSC ಅಧಿಕೃತ ವೆಬ್ ಸೈಟ್ https://ssc.gov.in ನಲ್ಲಿ ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ Tire -1 ಪರೀಕ್ಷೆಯ ಕೀ ಉತ್ತರಗಳ PDF ಪಡೆದುಕೊಳ್ಳಬಹುದು.
ಬಿಡುಗಡೆ ಮಾಡಲಾಗಿರುವ ಕೀ ಉತ್ತರಗಳು ತಾತ್ಕಾಲಿಕವಾಗಿದ್ದು, ಈ ಉತ್ತರಗಳ ಮೇಲೆ ಆಕ್ಷೇಪಣೆ ಗಳನ್ನು ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅಧಿಕೃತ ವೆಬ್ ಸೈಟ್ ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಪ್ರಶ್ನೆ ಪತ್ರಿಕೆ ಸಂಖ್ಯೆ ವರ್ಷನ್ ಕೋಡ್, ಇನ್ನಿತರ ಮಾಹಿತಿಗಳೊಂದಿಗೆ ಜುಲೈ 23 ಸಂಜೆ 5:30ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಲೇಖನದಲ್ಲಿ ನಾವು ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಮತ್ತು ಆಕ್ಷೇಪನೆಗಳನ್ನು ಸಲ್ಲಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ತಿಳಿದುಕೊಳ್ಳೋಣ.
Important Dates of SSC CHSL Answer Key 2024
SSC CHSL 2024 ಪರೀಕ್ಷಯ ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಪ್ರಾರಂಭದ ದಿನಾಂಕ: ಜುಲೈ 18,2024
ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 23, 2024
How to Download SSC CHSL Answer Key 2024
ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ :
SSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ssc.gov.in/
“Key Answers” ಟ್ಯಾಬ್ ಕ್ಲಿಕ್ ಮಾಡಿ.
“SSC CHSL 2024 ಕೀ ಉತ್ತರ” ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. “ಸಲ್ಲಿಸು” ಕ್ಲಿಕ್ ಮಾಡಿ.
ಕೀ ಉತ್ತರಗಳ PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.
ಆಕ್ಷೇಪಣೆ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:
SSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ssc.gov.in/
“Key Answers” ಟ್ಯಾಬ್ ಕ್ಲಿಕ್ ಮಾಡಿ.
“SSC CHSL 2024 Objects” ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
“ಲಾಗಿನ್” ಕ್ಲಿಕ್ ಮಾಡಿ.
ಆಕ್ಷೇಪಣೆ ಸಲ್ಲಿಸಲು ಬಯಸುವ ಪ್ರಶ್ನೆಯನ್ನು ಆಯ್ಕೆಮಾಡಿ.
ನಿಮ್ಮ ಉತ್ತರವನ್ನು ಆಯ್ಕೆಮಾಡಿ.
ನಿಮ್ಮ ಆಕ್ಷೇಪಣೆಗೆ ಬೆಂಬಲವಾಗಿ ಪುರಾವೆಗಳನ್ನು ಒದಗಿಸಿ (ಯಾವುದಾದರೂ ಇದ್ದರೆ).