SSC CPO Answer Key 2024: ಸಿಬ್ಬಂದಿ ಅಯ್ಕೆ ಅಯೋಗವು ನಡೆಸಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ದೆಹಲಿ ಪೊಲೀಸರಲ್ಲಿ ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ SSC CPO ಪರೀಕ್ಷೆಯ ಟೈರ್-1 ಅಂತಿಮ ಕೀ ಉತ್ತರಗಳನ್ನು ಅಕ್ಟೋಬರ್ 23, 2024ರಂದು ಪ್ರಕಟಿಸಿದೆ.
ಈ ಪರೀಕ್ಷೆಗಳನ್ನು ಸಿಬ್ಬಂದಿ ಆಯ್ಕೆ ಆಯೋಗವು ಜೂನ್ 27, 28 ಮತ್ತು 29 ರಂದು ನಡೆಸಲಾಗಿತ್ತು, ಪರೀಕ್ಷೆಗೆ ಸಾಕಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಈಗಾಗಲೇ ಇಲಾಖೆಯು ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 05, 2024 ರಂದು ಪ್ರಕಟಿಸಿತ್ತು. ಪ್ರಕಟಿಸಿದ ಕೀ ಉತ್ತರಗಳಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗನ್ನು ತಜ್ಞರು ಪರಿಶೀಲಿಸಿದ ನಂತರ ಇಲಾಖೆಯು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ.