SSC CPO Answer Key 2024: ಸಿಬ್ಬಂದಿ ಅಯ್ಕೆ ಅಯೋಗವು ನಡೆಸಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ದೆಹಲಿ ಪೊಲೀಸರಲ್ಲಿ ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ SSC CPO ಪರೀಕ್ಷೆಯ ಟೈರ್-1 ಕೀ ಉತ್ತರಗಳನ್ನು ಇಂದು (ಜುಲೈ 5) ರಂದು ಪ್ರಕಟಿಸಿದೆ.
ಈ ಪರೀಕ್ಷೆಗಳನ್ನು ಸಿಬ್ಬಂದಿ ಆಯ್ಕೆ ಆಯೋಗವು ಜೂನ್ 27, 28 ಮತ್ತು 29 ರಂದು ನಡೆಸಲಾಗಿತ್ತು, ಪರೀಕ್ಷೆಗೆ ಸಾಕಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ಹಾಜರದ ಅಭ್ಯರ್ಥಿಗಳು ಅನ್ ಲೈನ್ ಮೂಲಕ ತಾತ್ಕಾಲಿಕ ಕೀ ಉತ್ತರಗಳನ್ನು ಪಡೆದುಕೊಳ್ಳಬಹುದು. ಪ್ರಕಟಿಸಲಾಗಿರುವ ಕೀ ಉತ್ತರಗಳ ಮೇಲೆ ದೋಷವಿದ್ದರೆ ಅಭ್ಯರ್ಥಿಗಳು ಆಕ್ಷೇಪಲ್ಲಿಗಳನ್ನು ಸಲ್ಲಿಸಬಹುದು. ಪ್ರತಿ ಪ್ರಶ್ನೆಗೆ 100ರೂ ಶುಲ್ಕವನ್ನು ಪಾವತಿಸಿ ಪ್ರಶ್ನೆ ಪತ್ರಿಕೆ ಕೋಡ್ ಮತ್ತು ವರ್ಷನ್ ಕೋಡ್ ಗಳನ್ನು ಸಲ್ಲಿಸುವ ಮೂಲಕ ಕೀ ಉತ್ತರಗಳಿಗೆ ಅಕ್ಷೇಪಣೆಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬಹುದು. ಅಭ್ಯರ್ಥಿಗಳು ಕೀ ಉತ್ತರಗಳಿಗೆ ಅಕ್ಷೇಪಣೆ ಸಲ್ಲಿಸಲು ಪ್ರತ್ಯೇಕ ಲಿಂಕ್ ಒದಗಿಸಲಾಗಿದೆ.
ಪರೀಕ್ಷೆಗೆ ಹಾಜರದ ಅಭ್ಯರ್ಥಿಗಳು ಪ್ರಕಟಿಸಲಾಗಿರುವ ಕೀ ಉತ್ತರಗಳನ್ನು ಬಳಸಿಕೊಂಡು ತಮ್ಮ ಪರೀಕ್ಷೆಯ ಅಂಕಗಳನ್ನು ಅಂದಾಜು ಮಾಡಬಹುದಾಗಿದೆ. ಈ ಲೇಖನದಲ್ಲಿ ನಾವು ಅಧಿಕೃತ ಕೀ ಉತ್ತರಗಳನ್ನು ಅನ್ ಲೈನ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದೆ.
How to Download SSC CPO Answer Key 2024 (Tier-1)
ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ:
- SSC ಅಧಿಕೃತ ವೆಬ್ಸೈಟ್ https://ssc.nic.in/ ಗೆ ಭೇಟಿ ನೀಡಿ.
- ‘Key Answer’ ಟ್ಯಾಬ್ ಕ್ಲಿಕ್ ಮಾಡಿ.
- “SSC CPO 2024 ಟೈರ್-1 ಕೀ ಉತ್ತರ” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ SSC ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.
- “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
- ಕೀ ಉತ್ತರಗಳ PDF ಸ್ವರೂಪದಲ್ಲಿ ತೆರೆದುಕೊಳ್ಳುತ್ತದೆ.
Important Direct Links:
SSC CPO Answer Key 2024 (Tier-1) Notice PDF | Download |
SSC CPO Answer Key 2024 (Tier-1) Download Link | Click here |
Official Notification PDF | Download |
Official Website | ssc.gov.in |
More Updates | Karnataka Help.in |