SSC: ತಾತ್ಕಾಲಿಕ ಪರೀಕ್ಷಾ ಕ್ಯಾಲೆಂಡರ್‌ ಪ್ರಕಟ

Published on:

ಫಾಲೋ ಮಾಡಿ
SSC Exam Tentative Calendar 2026-27
SSC: ತಾತ್ಕಾಲಿಕ ಪರೀಕ್ಷಾ ಕ್ಯಾಲೆಂಡರ್‌ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗ(SSC) 2026-27ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದೆ.

2026ರಲ್ಲಿ ಅಧಿಸೂಚಿತ ಪರೀಕ್ಷೆಗಳಾದ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಸಂಯೋಜಿತ ಪದವಿ ಹಂತದ ಪರೀಕ್ಷೆ, ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ, ಆಯ್ಕೆ ನಂತರದ ಪರೀಕ್ಷೆ, ಹಂತ-XIV, ಸಂಯೋಜಿತ ಹೈಯರ್ ಸೆಕೆಂಡರಿ (10+2) ಮಟ್ಟದ ಪರೀಕ್ಷೆ, ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಪರೀಕ್ಷೆ, ಸಂಯೋಜಿತ ಹಿಂದಿ ಅನುವಾದಕರ ಪರೀಕ್ಷೆ, ಬಹು-ಕಾರ್ಯ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ (CBIC & CBN) ಪರೀಕ್ಷೆ, ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್ ಪರೀಕ್ಷೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs), NIA, SSFನ ಕಾನ್‌ಸ್ಟೆಬಲ್‌(GD) ಮತ್ತು ಅಸ್ಸಾಂ ರೈಫಲ್ಸ್‌ನ ರೈಫಲ್‌ಮನ್(GD) ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಕ್ಯಾಲೆಂಡರ್‌ಅನ್ನು ಆಯೋಗವು ತನ್ನ ಅಧಿಕೃತ ಜಾಲತಾಣ https://ssc.gov.in/homeದಲ್ಲಿ ಪ್ರಚುರಪಡಿಸಿದೆ.

About the Author

ನಾನು 2021 ರಿಂದ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

1 thought on “SSC: ತಾತ್ಕಾಲಿಕ ಪರೀಕ್ಷಾ ಕ್ಯಾಲೆಂಡರ್‌ ಪ್ರಕಟ”

Leave a Comment