ಸಿಬ್ಬಂದಿ ಆಯ್ಕೆ ಆಯೋಗವು 6144 MTS (ತಾಂತ್ರಿಕೇತರ) ಹುದ್ದೆಗಳು ಮತ್ತು 3439 ಹವಾಲ್ದಾರ್ (ಸಿಬಿಐಸಿ ಮತ್ತು ಸಿಬಿಎನ್) ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 30 ರಿಂದ 14 ನವೆಂಬರ್ 2024 ರವರೆಗೆ ಆನ್ ಲೈನ್ ಆಧಾರಿತ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)/ದೈಹಿಕ ಪ್ರಮಾಣೀಕರಣ ಪರೀಕ್ಷೆ (ಪಿಎಸ್‌ಟಿ) ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುವವರ ಆಯ್ಕೆ ಪಟ್ಟಿ(SSC MTS Result 2025)ಯನ್ನು ಇಲಾಖೆಯು ಜ.21 ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫಲಿತಾಂಶ ಪರಿಶೀಲಿಸಿಕೊಳ್ಳಲು ಅಧಿಕೃತ ವೆಬ್ಸೈಟ್ ಅಥವಾ ನಾವು ನೇರವಾಗಿ ನೀಡಿರುವ ಲಿಂಕ್ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ.