ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿ ಕುರಿತಾದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಮುಕ್ತಾಯಗೊಂಡಿದ್ದು, ಸದರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪು ಮಾಡಿದ್ದರೆ ಅರ್ಜಿ ನಮೂನೆಯನ್ನು ಸರಿ ಪಡಿಸಿಕೊಳ್ಳಲು ತಿದ್ದುಪಡಿ ಲಿಂಕ್ ಬಿಡುಗಡೆ ಮಾಡಲಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸುವ ಸಮಯದಲ್ಲಿ ವೈಯಕ್ತಿಕ ವಿವರಗಳು, ದಾಖಲೆಗಳು, ಅರ್ಜಿಯಲ್ಲಿನ ಇನ್ನಿತರ ಮಾಹಿತಿಗಳನ್ನು ತಪ್ಪು ಮಾಡಿದ್ದಲ್ಲಿ, ಸರಿ ಮಾಡುವುದಕ್ಕಾಗಿ ಲಿಂಕ್ ಬಿಡುಗಡೆ ಮಾಡಲಾಗಿದೆ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಲು SSC Stenographer 2024 Application Correction Window ಅಧಿಕೃತ ವೆಬ್‌ಸೈಟ್ ಮೂಲಕ ssc.gov.in ಭೇಟಿ ನೀಡಿ ಆಗಸ್ಟ್ 28 ರ ಒಳಗೆ ಅರ್ಜಿಯನ್ನು ತಿದ್ದುಪಡಿ ಮಾಡಬಹುದಾಗಿದೆ. ಈ ಲೇಖನದಲ್ಲಿ SSC Stenographer 2024 ಅರ್ಜಿಯನ್ನು ತಿದ್ದುಪಡಿ ಆನ್ ಲೈನ್ ಮೂಲಕ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
ಪ್ರಮುಖ ದಿನಾಂಕಗಳು:
ಅರ್ಜಿ ತಿದ್ದುಪಡಿ ಮಾಡಲು ಪ್ರಾರಂಭದ ದಿನಾಂಕ – ಆಗಸ್ಟ್ 27, 2024
ಅರ್ಜಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಆಗಸ್ಟ್ 28, 2024 (ರಾತ್ರಿ 11 ಗಂಟೆ)
Step By Step Edit Process of SSC Stenographer 2024 Application
ಅರ್ಜಿಯನ್ನು ಅನ್ ಲೈನ್ ಮೂಲಕ ತಿದ್ದುಪಡಿ ಮಾಡುವುದು ಹೇಗೆ…?
ಮೊದಲಿಗೆ SSC ಯ ಅಧಿಕೃತ ವೆಬ್ ಸೈಟ್ ssc.gov.in ಭೇಟಿ ಮಾಡಿ.
ನಿಮ್ಮ ನೋಂದಾಯಿತ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಮಾಡಿ.
SSC Stenographer 2024 Application Correction Window ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
ನಿಮ್ಮ ಅರ್ಜಿಯಲ್ಲಿ ತಿದ್ದುಪಡಿಯ ಅಗತ್ಯವಿರುವ ವಿವರಗಳನ್ನು ಗುರುತಿಸಿ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಿ.
ಕೊನೆಯದಾಗಿ ತಿದ್ದುಪಡಿಯನ್ನು ಯಶಸ್ವಿಯಾಗಿ ಮಾಡಿದ ಸಲ್ಲಿಸಿ ನಂತರ, ಪುಟವನ್ನು ಡೌನ್ಫೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
Important Direct Links:
SSC Stenographer 2024 Application Correction Notice PDF