ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-3ರ ಫಲಿತಾಂಶವನ್ನು ಜು.23ರಂದು ಸಂಜೆ 6.30ಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ-1, ಪರೀಕ್ಷೆ-2 ರ ಬಳಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಫಲಿತಾಂಶವನ್ನು ಸುಧಾರಣೆಗೊಳಿಸಿಕೊಳ್ಳುವ ಉದ್ದೇಶವಿರುವ ವಿದ್ಯಾರ್ಥಿಗಳಿಗೆ ಜುಲೈ 5 ರಿಂದ 12 ರವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು/ಪೋಷಕರು ಮಂಡಳಿಯ ಅಧಿಕೃತ ಜಾಲತಾಣ https://karresults.nic.in/ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದಾಗಿದೆ.
How to Check KSEAB SSLC Exam 3 Result 2025
ಎಸ್ಸೆಸ್ಸೆಲ್ಸಿ ಪರೀಕ್ಷೆ-3ರ ಫಲಿತಾಂಶವನ್ನು ಪರಿಶೀಲಿಸುವ ವಿಧಾನ
- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಫಲಿತಾಂಶದ ಅಧಿಕೃತ ವೆಬ್ ಸೈಟ್ https://karresults.nic.in/ಗೆ ಭೇಟಿ ನೀಡಿ.

- ಎಸ್.ಎಸ್.ಎಲ್.ಸಿ. 2025 ಪರೀಕ್ಷೆ – 1, 2 ಮತ್ತು 3 ರ ಉತ್ತಮ ಫಲಿತಾಂಶ ಪ್ರಕಟಣೆ /SSLC 2025 BEST OF EXAM – 1,2 & 3 RESULT ANNOUNCED ON 23rd July 2025 @ 6:30PM ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ ಸಲ್ಲಿಸಿ.
- ಫಲಿತಾಂಶವು ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
KSEAB SSLC Exam 3 Result 2025 Check Link | Check Now |
Official Website | kseab.karnataka.gov.in |
More Updates | KarnatakaHelp.in |