Supreme Court of India Various Assistant Recruitment 2025
ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (Supreme Court of India)ದ ನೋಂದಣಿ ಕಚೇರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ವಿವಿಧ ಕೇಡರ್ಗಳಲ್ಲಿ ಖಾಲಿ ಇರುವ ಸಹಾಯಕ ಸಂಪಾದಕ, ಸಹಾಯಕ ನಿರ್ದೇಶಕರು, ಹಿರಿಯ ನ್ಯಾಯಾಲಯ ಸಹಾಯಕ ಹಾಗೂ ಸಹಾಯಕ ಗ್ರಂಥಪಾಲಕ ಒಟ್ಟು 22 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆಯು ಜು.29ರಿಂದ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SCI ಅಧಿಕೃತ ವೆಬ್ಸೈಟ್https://www.sci.gov.in/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜುಲೈ 29, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 12, 2025
ಹುದ್ದೆಗಳ ವಿವರ:
ಸಹಾಯಕ ಸಂಪಾದಕ – 5 ಹುದ್ದೆಗಳು
ಸಹಾಯಕ ನಿರ್ದೇಶಕರು – 1 ಹುದ್ದೆ
ಹಿರಿಯ ನ್ಯಾಯಾಲಯ ಸಹಾಯಕ – 2 ಹುದ್ದೆಗಳು
ಸಹಾಯಕ ಗ್ರಂಥಪಾಲಕ – 14 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆಯಿಂದ ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವವರು ಅರ್ಹರು;
• ಸಹಾಯಕ ಸಂಪಾದಕ ಹುದ್ದೆಗೆ – ಕಾನೂನು ಪದವಿ(LLB) ಜೊತೆಗೆ ಇಂಗ್ಲೀಷ್ ಬಾರ್ನ ಸದಸ್ಯರಾಗಿರಬೇಕು ಅಥವಾ ಹೈಕೋರ್ಟ್ನ ವಕೀಲರಾಗಿರಬೇಕು.
• ಸಹಾಯಕ ನಿರ್ದೇಶಕ ಹುದ್ದೆಗೆ – ಪ್ರಥಮ ದರ್ಜೆಯೊಂದಿಗೆ ಮ್ಯೂಸಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣ.
• ಹಿರಿಯ ನ್ಯಾಯಾಲಯ ಸಹಾಯಕ ಹುದ್ದೆಗೆ – ಮ್ಯೂಸಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ (ಉನ್ನತ II ದರ್ಜೆಯೊಂದಿಗೆ – ಕನಿಷ್ಠ ಶೇ.55 ಅಂಕಗಳು).
• ಸಹಾಯಕ ಗ್ರಂಥಪಾಲಕ ಹುದ್ದೆಗೆ – ಗ್ರಂಥಾಲಯ ವಿಜ್ಞಾನ(Library Science)ದಲ್ಲಿ ಪದವಿ/ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಡಿಪ್ಲೊಮಾ.
ಹುದ್ದೆಗಳಿಗೆ ಆಧಾರಿತವಾಗಿ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿರಿ.
ವಯೋಮಿತಿ:
ಕನಿಷ್ಠ ಮಿತಿ 30 ವರ್ಷಗಳು
ಗರಿಷ್ಠ ಮಿತಿ 40 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಕಂಪ್ಯೂಟರ್ ಪರೀಕ್ಷೆ(ಸ.ಸಂಪಾದಕ ಹುದ್ದೆ ಹೊರತುಪಡಿಸಿ)
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 1500 ರೂ.
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ, ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ – 750ರೂ.
How to Apply for Supreme Court of India Assistant Recruitment 2025
ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನ ಅನುಸರಿಸಿ;
• SCI ಅಧಿಕೃತ ವೆಬ್ಸೈಟ್ https://cdn3.digialm.com//EForms/configuredHtml/32912/95087/Index.htmlಗೆ ಭೇಟಿ ನೀಡಿ.
• ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಓಟಿಪಿ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
2a
Srushti
Qualification: 2nd pu completed
From Mangalore
2puc complete