ದಕ್ಷಿಣ ಪಶ್ಚಿಮ ರೈಲ್ವೆ, ಹುಬ್ಬಳ್ಳಿಯಲ್ಲಿ 2025-26ನೇ ಸಾಲಿಗೆ ಕ್ರೀಡಾಕೋಟಾದಡಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶ (RRC) ಅಧಿಸೂಚನೆ ಹೊರಡಿಸಿದೆ.
ವಿವಿಧ ವಿಭಾಗಗಳಿಗೆ ಒಟ್ಟು 46 ಹುದ್ದೆಗಳ ನೇಮಕಾತಿ ನಡೆಯಲಿದೆ. ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್, ಕ್ರಿಕೆಟ್ ಹಾಗೂ ಗಾಲ್ಫ್ ಸೇರಿದಂತೆ ಇತರೆ ಕ್ರೀಡೆಗಳ ಕ್ರೀಡಾಪಟು ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು RRC HUBLI ಅಧಿಕೃತ ಜಾಲತಾಣ https://www.rrchubli.in/ಕ್ಕೆ ಭೇಟಿ ನೀಡಿ ನವೆಂಬರ್ 20ರೊಳಗೆ ಅರ್ಜಿ ಸಲ್ಲಿಸಿ.
ವಲಯ ರೈಲ್ವೆ ಕೋಟಾ – ಲೆವೆಲ್-5/4 – 05 ಹುದ್ದೆಗಳು ವಲಯ ರೈಲ್ವೆ ಕೋಟಾ – ಲೆವೆಲ್-3/2 – 16 ಹುದ್ದೆಗಳು ವಲಯ ರೈಲ್ವೆ ಪ್ರಧಾನ ಕಚೇರಿ ಕೋಟಾ ಹಂತ-1 – 10 ಹುದ್ದೆಗಳು ಬೆಂಗಳೂರು ವಿಭಾಗದ ಕೋಟಾ – ಹಂತ-1 – 05ಹುದ್ದೆಗಳು ಹುಬ್ಬಳ್ಳಿ ವಿಭಾಗದ ಕೋಟಾ – ಹಂತ-1 – 05 ಹುದ್ದೆಗಳು ಮೈಸೂರು ವಿಭಾಗದ ಕೋಟಾ – ಹಂತ-1 – 05ಹುದ್ದೆಗಳು
ಒಟ್ಟು 46 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಲೆವೆಲ್ 5 ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
ಲೆವೆಲ್ 4 ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ/ತತ್ಸಮಾನ ಅರ್ಹತೆ ಅಥವಾಬಿ.ಎಸ್ಸಿ. (ಭೌತಶಾಸ್ತ್ರ) ಉತ್ತೀರ್ಣ ಅಥವಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ ಅಥವಾ ಗಣಿತ) ವಿಷಯದೊಂದಿಗೆ ಉತ್ತೀರ್ಣರಾಗಿರಬೇಕು.
ಲೆವೆಲ್ 3/2 ಹುದ್ದೆಗಳಿಗೆ – ತಾಂತ್ರಿಕೇತರ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ NCVT/SCVT ಅನುಮೋದಿಸಿದ ಮೆಟ್ರಿಕ್ಯುಲೇಷನ್ ಪ್ಲಸ್ ಕೋರ್ಸ್ ಪೂರ್ಣಗೊಳಿಸಿದ ಆಕ್ಟ್ ಅಪ್ರೆಂಟಿಸ್ಶಿಪ್/ಐಟಿಐ ಉತ್ತೀರ್ಣರಾಗಿರಬೇಕು.
ಲೆವೆಲ್ 1 ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
**ಗಮನಿಸಿ; ಈ ಮೇಲಿನ ವಿದ್ಯಾರ್ಹತೆಯ ಜೊತೆಗೆ ನಿಗದಿತ ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಕಡ್ಡಾಯವಾಗಿದೆ.
ವಯೋಮಿತಿ:
ಜನವರಿ 01, 2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು
• 02-01-2001 ಮತ್ತು 01-01-2008 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
• ಯಾವುದೇ ವಯಸ್ಸಿನ ಸಡಿಲಿಕೆ ಅನ್ವಯಿಸುವುದಿಲ್ಲ.
ಆಯ್ಕೆ ವಿಧಾನ:
ಕ್ರೀಡಾ ಪ್ರಯೋಗ/ದೈಹಿಕ ಪರೀಕ್ಷೆ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರಿ ನಿಯಮಗಳ ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
• ಪ.ಜಾತಿ, ಪ.ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗ, ಮಾಜಿ ಸೈನಿಕರು, ಅಲ್ಪಸಂಖ್ಯಾತ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 250ರೂ.
• ಉಳಿದ ಎಲ್ಲಾ ಅಭ್ಯರ್ಥಿಗಳಿಗೆ – 500ರೂ.
ಹಂತ-ಹಂತವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ
• ಮೊದಲಿಗೆ ಉದ್ಯೋಗ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಪೂರೈಸುವ ಅಭ್ಯರ್ಥಿಗಳು
• RRC SWR ಅಧಿಕೃತ ಜಾಲತಾಣ https://www.rrchubli.in/ ಕ್ಕೆ ಭೇಟಿ ನೀಡಿ.
• ಪ್ರಮುಖ ಸೂಚನೆ ಶೀರ್ಷಿಕೆಯ ವಿಭಾಗದ ಕೆಳಗೆ ನೀಡಲಾಗಿರುವ – 2025-26ನೇ ಸಾಲಿನ ಕ್ರೀಡಾ ಕೋಟಾ (OA) ವಿರುದ್ಧದ ನೇಮಕಾತಿಗಾಗಿ SWR (ENNo.SWR/P-HQ/Sports (OA)/25-26, ದಿನಾಂಕ 21.10.2025) ನಲ್ಲಿನ ಅನುಬಂಧಗಳೊಂದಿಗೆ ಅಧಿಸೂಚನೆ – “ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಲಿಂಕ್ ಮೇಲೆ ಟ್ಯಾಪ್ ಮಾಡಿ.
• ಬಳಕೆದಾರರ ಹೆಸರು ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Hai