ನೀವು ಉದ್ಯೋಗದಲ್ಲಿರಿ ಅಥವಾ ವ್ಯವಹಾರದಲ್ಲಿಯೇ ಇರಿ, ಜೀವನದಲ್ಲಿ ಉಳಿತಾಯ ಎನ್ನುವುದು ಬಹು ಮುಖ್ಯವಾದದ್ದಾಗಿದೆ. ಚಿಕ್ಕ ಚಿಕ್ಕ ಕಂತುಗಳ ಮೂಲಕ ದೀರ್ಘಾವಧಿಯಲ್ಲಿ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಎಲ್.ಐ.ಸಿ. ತುಂಬಾ ಸಹಕಾರಿ. ಈ ಸಂಸ್ಥೆಯು ಹಲವಾರು ವಿಮಾ ಯೋಜನೆಗಳನ್ನು ಹೊರತಂದಿದ್ದು, ಅವುಗಳಲ್ಲಿ ಯಾವುದನ್ನೂ ಆಯ್ದುಕೊಳ್ಳುವುದು ಎಂಬ ಗೊಂದಲ ಉಂಟಾಗುವುದು ಸಹಜ. ನಾವು ಇಲ್ಲಿ ನಿಮಗಾಗಿ 2025 ರ ಅತ್ಯುತ್ತಮ 5 ವಿಮಾ ಯೋಜನೆಗಳ ಮಾಹಿತಿಯನ್ನು ನೀಡಿದ್ದೇವೆ. ಕೊನೆಯವರೆಗೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ನೀವು ಕಡಿಮೆ ಬಜೆಟ್ನಲ್ಲಿ ಅತ್ಯುತ್ತಮ ಜೀವ ವಿಮೆಯನ್ನು ಹುಡುಕುತ್ತಿದ್ದರೆ, ಈ ಪಾಲಿಸಿಯು ನಿಮಗೆ ಸೂಕ್ತವಾಗಿದೆ. ಇದನ್ನು ದಿನಕ್ಕೆ ಕೇವಲ ₹45 ಅಥವಾ ತಿಂಗಳಿಗೆ 1,358 ರೂಪಾಯಿಯೊಂದಿಗೆ ಪ್ರಾರಂಭಿಸಬಹುದು. ಈ ಪಾಲಿಸಿಯು ನಿಮಗೆ ರೂ. 25 ಲಕ್ಷದವರೆಗಿನ ಭವಿಷ್ಯದ ನಿಧಿಯನ್ನು ಕೂಡಿಸಲು ಅನುವು ಮಾಡಿಕೊಡುತ್ತದೆ. ಬೋನಸ್ಗಳು, ಸಾಲ ಸೌಲಭ್ಯ ಮತ್ತು ಅಪಘಾತ ಮರಣ/ಅಂಗವಿಕಲತೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ಈ ಪಾಲಿಸಿಯು ಒದಗಿಸುತ್ತದೆ. ಈ ಯೋಜನೆಯ ಕನಿಷ್ಠ ಅವಧಿ 15 ವರ್ಷಗಳು ಮತ್ತು ಮುಕ್ತಾಯದ ನಂತರ ಬೋನಸ್ಗಳೊಂದಿಗೆ ಒಂದು ದೊಡ್ಡ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
ಎಲ್.ಐ.ಸಿ. ನ್ಯೂ ಎಂಡೋಮೆಂಟ್ ಯೋಜನೆ(LIC New Endowment Plan):
ವಿಮೆಗಿಂತ ಹೂಡಿಕೆಯ ಮೇಲೆ ಹೆಚ್ಚು ಗಮನಹರಿಸುವವರಿಗೆ ಈ ಯೋಜನೆ ಸೂಕ್ತವಾಗಿದೆ. ಇದು ಉಳಿತಾಯ ಮತ್ತು ಭದ್ರತೆ ಎರಡನ್ನೂ ಕಲ್ಪಿಸುತ್ತದೆ. ಇದು ಸ್ಥಿರ ಆದಾಯ ಮತ್ತು ಬೋನಸ್ಗಳನ್ನು ನೀಡುವ ಕಡಿಮೆ ಅಪಾಯದ ಯೋಜನೆಯಾಗಿದ್ದು, ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಯನ್ನು ಈ ಪಾಲಿಸಿಯ ಮೂಲಕ ಮಾಡಬಹುದಾಗಿದೆ.
ಎಲ್.ಐ.ಸಿ. ಜೀವನ್ ಶಿರೋಮಣಿ(LIC’s Jeevan Shiromani):
ಇದು ದೊಡ್ಡ ಆದಾಯವನ್ನು ಹೊಂದಿರುವ ವ್ಯಕ್ತಿಗಳಿಗೆ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆಯ ಅವಧಿ ಕಡಿಮೆಯಿದ್ದು, ದೀರ್ಘ ಲಾಭವನ್ನು ನೀಡುತ್ತದೆ. ಇಲ್ಲಿ ನೀವು 1 ಕೋಟಿ ರೂಪಾಯಿವರೆಗಿನ ವಿಮಾ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯ ಮುಖ್ಯ ವೈಶಿಷ್ಟ್ಯವೆಂದರೆ ಕೇವಲ 4 ವರ್ಷಗಳವರೆಗೆ ಪ್ರೀಮಿಯಂ ಪಾವತಿಸುವ ಮೂಲಕ 14, 16, 18, ಅಥವಾ 20 ವರ್ಷಗಳ ಅವಧಿಯಲ್ಲಿ ಉತ್ತಮ ಮನಿ-ಬ್ಯಾಕ್ ಪ್ರಯೋಜನಗಳನ್ನು ಪಡೆಯಬಹುದು.
ಎಲ್.ಐ.ಸಿ. ಜೀವನ್ ತರುಣ್(LIC Jeevan Tarun):
ಇದು ಮಕ್ಕಳಿಗಾಗಿ ರೂಪಿಸಲಾದ ಜೀವ ವಿಮೆ ಮತ್ತು ಉಳಿತಾಯ ಯೋಜನೆಯಾಗಿದೆ. ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಹಾಗೂ ಭವಿಷ್ಯದ ಅಗತ್ಯತೆಗಳ ಬಗ್ಗೆ ನೀವು ಕಾಳಜಿವಹಿಸುತ್ತಿದ್ದರೆ, ಈ ಯೋಜನೆ ನಿಮಗೆ ವಿಶೇಷವಾಗಿ ಸೂಕ್ತವಾಗಿದೆ. ಈ ಪಾಲಿಸಿಯಡಿಯಲ್ಲಿ ಮಗುವಿಗೆ 20 ರಿಂದ 25 ವರ್ಷ ವಯಸ್ಸಿನವರೆಗೆ ಪ್ರತಿ ವರ್ಷ ಒಂದು ನಿರ್ದಿಷ್ಟ ಮೊತ್ತವನ್ನು (ಹಣ ವಾಪಸ್) ನೀಡಲಾಗುತ್ತದೆ ಮತ್ತು ಕೊನೆಯಲ್ಲಿ, ಬೋನಸ್ಗಳೊಂದಿಗೆ ಒಂದು ದೊಡ್ಡ ಮೊತ್ತವನ್ನು ಸಹ ನೀಡಲಾಗುತ್ತದೆ.
ಎಲ್.ಐ.ಸಿ. ಜೀವನ್ ಉಮಾಂಗ್(Jeevan Umang):
ವೃತ್ತಿ ಜೀವನವನ್ನು ಪೂರ್ಣಗೊಳಿಸಿ ನಿವೃತ್ತಿ ಹೊಂದಿದ ನಂತರ ನಿರಂತರ ಆದಾಯ ಗಳಿಸಲು ಬಯಸಿದ್ದರೆ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ವಿಮಾ ಮೊತ್ತ ಕನಿಷ್ಠ 2 ಲಕ್ಷ ರೂಪಾಯಿಗಳಿಂದ ಗರಿಷ್ಟ ಯಾವುದೇ ಮೊತ್ತಗಳನ್ನು ಹೂಡಿಕೆ ಮಾಡಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಪಾವತಿಸಿದ ನಂತರ ಪ್ರತಿ ವರ್ಷ 8% ಖಾತರಿಯ ಹಣವನ್ನು ಹಿಂತಿರುಗಿ ನೀಡಲಾಗುತ್ತದೆ ಅಲ್ಲದೇ ಈ ಆದಾಯವು ಜೀವನಪರ್ಯಂತ ಮುಂದುವರಿಯುತ್ತದೆ. ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಕುಟುಂಬವು ಸಂಪೂರ್ಣ ವಿಮಾ ರಕ್ಷಣೆಯನ್ನು ಪಡೆಯುತ್ತದೆ.
ಸೂಚನೆ: ಇದು ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ. ಈ ಪಾಲಿಸಿಗಳನ್ನು ನೀವು ಮಾಡಿಸಲು ಬಯಸಿದರೆ ನೇರವಾಗಿ ಎಲ್.ಐ.ಸಿ. ಕಚೇರಿಗೆ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆಯ್ಕೆ ಮಾಡಿಕೊಳ್ಳಿ. ಅಂತಿಮವಾಗಿ ಸರಿಯಾದ ಹೂಡಿಕೆಯ ಆಯ್ಕೆ ನಿಮ್ಮದಾಗಿರುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.in ಗೆ ಭೇಟಿ ನೀಡಿ.