DRDO ಫೆಲೋಶಿಪ್: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯ ಮನೋವಿಜ್ಞಾನ ಸಂಶೋಧನಾ ರಕ್ಷಣಾ ಸಂಸ್ಥೆ(DIPR)ಯು ಜೂನಿಯರ್ ರಿಸರ್ಚ್ ಫೆಲೋಶಿಪ್(JRF), ರಿಸರ್ಚ್ ಅಸೋಸಿಯೇಟ್(RA) ಫೆಲೋಶಿಪ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಫೆಲೋಶಿಪ್ ಆರಂಭದಲ್ಲಿ ಎರಡು ವರ್ಷದ ಅವಧಿವರೆಗೆ ಇರುತ್ತದೆ, ನಿಯಮಗಳ ಪ್ರಕಾರ ಅವಧಿ ವಿಸ್ತರಿಸಬಹುದಾಗಿದೆ. ಜೆಆರ್‌ಎಫ್‌ಗಾಗಿ ಮನೋವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನೇಟ್/ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ರಿಸರ್ಚ್ ಅಸೋಸಿಯೇಟ್ ಫೆಲೋಶಿಪ್‌ಗಾಗಿ ಮನೋವಿಜ್ಞಾನದಲ್ಲಿ ಪಿಎಚ್.ಡಿ ಹೊಂದಿರುವವರು ಅರ್ಜಿ ಸಲ್ಲಿಕೆಗೆ ಅರ್ಹರು. ಅಧಿಕೃತ ವೆಬ್‌ಸೈಟ್https://www.drdo.gov.in/drdoನಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ನಿರ್ದೇಶಕರು … More