ಗೆಜೆಟೆಡ್ ಪ್ರೊಬೇಷನರ್: ವ್ಯಕ್ತಿತ್ವ ಪರೀಕ್ಷೆ ವೇಳಾಪಟ್ಟಿ ಹಿಂಪಡೆದ ಕೆಪಿಎಸ್ಸಿ.!
ಬೆಂಗಳೂರು: 2024-25ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗೆ ಸಂಬಂಧ ಮಾ.23 ರಿಂದ ಮೇ.04ರವೆರೆಗೆ ನಡೆಸಲು ಉದ್ದೇಶಿಸಲಾಗಿದ್ದ, ವ್ಯಕ್ತಿತ್ವ ಪರೀಕ್ಷೆ ಹಾಗೂ ಮೂಲ ದಾಖಲೆ ಪರಿಶೀಲನೆಯ ವೇಳಾಪಟ್ಟಿಯನ್ನು ಹಿಂಪಡಿಯಲಾಗಿದೆ. ಮಾ.10ರಂದು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದ ವೇಳಾಪಟ್ಟಿಯನ್ನು ಆಡಳಿತಾತ್ಮಕ ಕಾರಣಗಳಿಂದ ಹಿಂಪಡೆಯಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಕೆಪಿಎಸ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.