ಜೆಇಇ (ಮುಖ್ಯ) ಪರೀಕ್ಷೆ 2026ರ ಪ್ರವೇಶ ಪತ್ರ ಬಿಡುಗಡೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜ.21 ರಿಂದ 24ರವೆರೆಗೆ ನಡೆಸಲಿಸರುವ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ)–2026 ಸೆಷನ್-1ರ ಪ್ರವೇಶ ಪತ್ರವನ್ನು ಶನಿವಾರ(ಜ.17) ಬಿಡುಗಡೆಗೊಳಿಸಿದೆ. ಬಿ.ಇ, ಬಿ.ಟೆಕ್‌ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆ-1 ಇದಾಗಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವೆರೆಗೆ ಒಂದು ಪಾಳಿಗೆ ಹಾಗೂ ಎರಡನೇ ಪಾಳಿಗೆ ಮಧ್ಯಾಹ್ನ 3 ರಿಂದ ಸಂಜೆ 6ರವೆರೆಗೆ ಇರಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://jeemain.nta.nic.in/ಮೂಲಕ ತಮ್ಮ ಲಾಗಿನ್‌ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರ ಪಡೆದುಕೊಳ್ಳಬಹುದು. ಪ್ರವೇಶ ಪತ್ರ ಡೌನ್ಲೋಡ್‌ ಮಾಡುವಾಗ ತೊಂದರೆ ಎದುರಾದಲ್ಲಿ … More

ಯುಜಿಸಿ-ನೆಟ್‌ ಡಿಸೆಂಬರ್ 2025ರ ತಾತ್ಕಾಲಿಕ ಕೀ ಉತ್ತರ ಪ್ರಕಟ

2025ರ ಡಿಸೆಂಬರ್ ಮಾಹೆಯ ಯುಜಿಸಿ-ನೆಟ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜ.14ರಂದು ಪ್ರಕಟಿಸಿದೆ. ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು 2025ರ ಡಿ.31 ಮತ್ತು 2026ರ ಜ.02, 03, 05, 06 ಹಾಗೂ 07ರವರೆಗೆ ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಸದರಿ ಪರೀಕ್ಷೆಯ ಕೀ ಉತ್ತರವನ್ನು NTA ಅಧಿಕೃತ ಜಾಲತಾಣ https://ugcnet.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶ ತಾತ್ಕಾಲಿಕ ಉತ್ತರ … More

ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ{CUET UG}ಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ[CUET (UG)]ಯ ನೋಂದಣಿ ಜ.03ರಿಂದ ಆರಂಭವಾಗಿದೆ. ಪ್ರವೇಶ ಪರೀಕ್ಷೆಯು ಮೇ.11 ರಿಂದ 31ರವರೆಗೆ ನಡೆಯಲಿದೆ. ಭಾರತದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು/ಭಾಗವಹಿಸುವ ವಿಶ್ವವಿದ್ಯಾಲಯಗಳಲ್ಲಿ (ರಾಜ್ಯ/ಡೀಮ್/ಖಾಸಗಿ) ಪದವಿ ಪೂರ್ವ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯಾಗಿದೆ. ಕನ್ನಡ ಭಾಷೆ ಸೇರಿ 13 ಭಾಷೆಗಳನ್ನೊಳಗೊಂಡ ಒಟ್ಟು 37 ವಿಷಯಗಳು ಕುರಿತು ಪರೀಕ್ಷೆ ಇದಾಗಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು NTA ಅಧಿಕೃತ ವೆಬ್‌ಸೈಟ್ … More

ಜಂಟಿ CSIR UGC NET ಡಿಸೆಂಬರ್ 2025ರ ಕೀ ಉತ್ತರ ಪ್ರಕಟ

2025ರ ಡಿಸೆಂಬರ್ ಮಾಹೆಯ ಜಂಟಿ CSIR UGC NET ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತವಾಗಿ ಮಂಗಳವಾರ ಪ್ರಕಟಿಸಿದೆ. ಪರೀಕ್ಷೆಯನ್ನು ಡಿ.18ರಂದು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.ಒಟ್ಟು 2,12,552 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಸಂಸ್ಥೆ ತಿಳಿಸಿದೆ. ಇದೀಗ ಸದರಿ ಪರೀಕ್ಷೆಯ ಕೀ ಉತ್ತರವನ್ನು CISR ಅಧಿಕೃತ ಜಾಲತಾಣ https://csirnet.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್‌ ವಿವರಗಳನ್ನು ಬಳಸಿಕೊಂಡು ಕೀ ಉತ್ತರಗಳನ್ನು ಪರಿಶೀಲನೆ … More

ಯುಜಿಸಿ NET ಡಿಸೆಂಬರ್ 2025ರ ಪರೀಕ್ಷೆಗೆ ನೋಂದಣಿ ಪ್ರಾರಂಭ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 2025ರ ಡಿಸೆಂಬರ್ ಆವೃತ್ತಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೋಂದಣಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಹೊಂದಲು ಮತ್ತು ಪಿಎಚ್‌ಡಿ ಪ್ರವೇಶ ಪಡೆಯಲು ಅರ್ಹತೆಯನ್ನು ನಿರ್ಧರಿಸುತ್ತದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಾಗಿದ್ದು, ಒಟ್ಟು 85 ವಿಷಯಗಳಿಗೆ ಪರೀಕ್ಷೆ ಇದೇ ಡಿಸೆಂಬರ್‌ನಲ್ಲಿ ನಡೆಯಲಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನ.07ರವರೆಗೆ ಅವಕಾಶವಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು NTA ಅಧಿಕೃತ ವೆಬ್‌ಸೈಟ್ … More

Sainik School Result 2025(OUT): ಸೈನಿಕ ಶಾಲೆ ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2025-26 ನೇ ಸಾಲಿನ 6 ರಿಂದ 9ನೇ ತರಗತಿ ಪ್ರವೇಶಾತಿಗೆ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯನ್ನು ದೇಶದಾದ್ಯಂತ ಏಪ್ರಿಲ್ 5ರಂದು ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶವನ್ನು ಮೇ 22 ರಂದು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2025-26 ನೇ ಸಾಲಿನ 6 ರಿಂದ 9ನೇ ತರಗತಿಗೆ ನಡೆಸಿದ್ದ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯು ದೇಶದ ಒಟ್ಟು 190 ನಗರದ 527 ಪರೀಕ್ಷಾ ಕೇಂದ್ರದಲ್ಲಿ ನಡೆಸಿತ್ತು. ಸಂಸ್ಥೆಯ … More

CUET UG 2024: ಅರ್ಜಿ ಸಲ್ಲಿಕೆ ಮರು ಪ್ರಾರಂಭ, ಹೊಸ ದಿನಾಂಕ ಪ್ರಕಟ

CUET UG 2024 application Last Date extended: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NIA) ನಡೆಸುವ ಸ್ನಾತಕ ಕೋರ್ಸ್‌ಗಳಿಗೆ ಕೇಂದ್ರೀಯ ವಿವಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಲು ನಡೆಸುವ ಸಿಯುಇಟಿ ಯುಜಿ ರಿಜಿಸ್ಟ್ರೇಷನ್‌ಗೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ -ಸಿಯುಇಟಿ ಯುಜಿ 2024 ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 5 (ರಾತ್ರಿ 9:50) ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ಕುರಿತಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ … More