ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ (IITB) ಪ್ರಸಕ್ತ ಸಾಲಿನ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್ ಪ್ರವೇಶಾತಿಗಾಗಿ ಅಂಡರ್ ಗ್ರಾಜುಯೇಟ್ಸ್ ಕಾಮನ್ ಎಕ್ಸಾಮಿನೇಷನ್ ಫಾರ್ ಡಿಸೈನ್(UCEED)2026ರ ಪ್ರವೇಶ ಪರೀಕ್ಷೆ ನೋಂದಣಿಗೆ ಅರ್ಜಿ ಆಹ್ವಾನಿಸಿದೆ.
ಪ್ರತಿ ವರ್ಷ ಭಾರತದ ಪ್ರತಿಷ್ಠಿತ ಐಐಟಿಗಳಾದ ದೆಹಲಿ, ಗುವಾಹಟಿ, ಹೈದ್ರಾಬಾದ್, ಇಂದೋರ್, ರೂರ್ಕಿ ಮತ್ತು IIITDM ಜಬಲ್ಪುರ ಸಂಸ್ಥೆಗಳಲ್ಲಿ ವಿನ್ಯಾಸದಲ್ಲಿ ಪದವಿ(ಬಿಡಿಇಎಸ್) ಕಾರ್ಯಕ್ರಮಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ನಡೆಸುವ ಪರೀಕ್ಷೆಯಿದಾಗಿದೆ. ಪ್ರವೇಶ ಪರೀಕ್ಷಾ ನೋಂದಣಿಗೆ ಅ.31ರವರೆಗೆ ಅವಕಾಶವಿದ್ದು, ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು UCEED ಅಧಿಕೃತ ಜಾಲತಾಣ https://www.uceed.iitb.ac.in/2026/ ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕದೊಂದಿಗೆ ನೋಂದಣಿಗೆ ಕೊನೆಯ ದಿನಾಂಕ – ಅಕ್ಟೋಬರ್ 31, 2025
ವಿಳಂಬ ಶುಲ್ಕದೊಂದಿಗೆ ನೋಂದಣಿಗೆ ಕೊನೆಯ ದಿನಾಂಕ – ನವೆಂಬರ್ 07, 2025
ಪ್ರವೇಶ ಪತ್ರ ಬಿಡುಗಡೆಯ ದಿನಾಂಕ – ಜನವರಿ 02, 2026
UCEED-2026 ಪರೀಕ್ಷಾ ದಿನಾಂಕ – ಜನವರಿ 18, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು 2025ರ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 2026ರಲ್ಲಿ ವಿಜ್ಞಾನ, ವಾಣಿಜ್ಯ, ಅಥವಾ ಕಲೆ ಮತ್ತು ಮಾನವಿಕ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಯುಸಿಇಇಡಿ 2026 ಪ್ರವೇಶ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.
2024 ಅಥವಾ ಅದಕ್ಕಿಂತ ಮೊದಲು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಸದರಿ ಪರೀಕ್ಷೆ ಬರೆಯಲು ಅರ್ಹರಾಗಿರುವುದಿಲ್ಲ.
ವಯಸ್ಸಿನ ಮಿತಿ:
• ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ(ಎನ್ಸಿಎಲ್ ) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು – ಅಕ್ಟೋಬರ್ 1, 2001 ರಂದು ಅಥವಾ ನಂತರ ಜನಿಸಿರಬೇಕು.
• ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು – ಅಕ್ಟೋಬರ್ 1, 1996 ರಂದು ಅಥವಾ ನಂತರ ಜನಿಸಿರಬೇಕು.
ಪ್ರಯತ್ನಗಳ ಸಂಖ್ಯೆ:
ಒಬ್ಬ ಅಭ್ಯರ್ಥಿಯು ಗರಿಷ್ಠ ಎರಡು ಬಾರಿ UCEED ಅನ್ನು ಪ್ರಯತ್ನಿಸಬಹುದು, ಅದೂ ಸತತ ವರ್ಷಗಳಲ್ಲಿ. UCEED ಅಂಕವು ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ ಮತ್ತು ಅದೇ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಮಾತ್ರ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡದ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 2,000ರೂ. ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 4,000ರೂ. ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕದ ನಂತರ ವಿಳಂಬ ಶುಲ್ಕ ಹೆಚ್ಚುವರಿ – 500ರೂ.
Steps to Register for UCEED 2026 Examination
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಿ;
• UCEED ಅಧಿಕೃತ ಜಾಲತಾಣ https://www.uceed.iitb.ac.in/2026/ಕ್ಕೆ ಭೇಟಿ ನೀಡಿ.
• ಮುಖಪುಟದಲ್ಲಿ “ನೋಂದಣಿ ಪೋರ್ಟಲ್” ಲಿಂಕ್ ಆಯ್ಕೆ ಮಾಡಿ.
Uceed 2026 Registration Form
• ನಂತರ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• UCEED-2026 ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
• ನಿಮ್ಮ ಆದ್ಯತಾ ಕ್ರಮದಲ್ಲಿ UCEED ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.