ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂ.25ರಿಂದ ಜೂ.29 ರವರೆಗೆ ನಡೆಸಲಾದ ಯುಜಿ-ನೇಟ್ 2025ರ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು, ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಮತ್ತು ಪಿ.ಎಚ್.ಡಿ ಸಂಶೋಧನೆಗೆ ಅರ್ಹರಾಗಲು ಅಭ್ಯರ್ಥಿಗಳ ಮಾನ್ಯತೆಯನ್ನು ನಿರ್ಧರಿಸಲು ದೇಶದಾದ್ಯಂತ 285 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜೂ.25ರಿಂದ ಜೂ.29 ರವರೆಗೆ UG-NET 2025ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಸಂಸ್ಥೆಯು ಸದರಿ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಅಂತಿಮ ಕೀ ಉತ್ತರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
UG-NET 2025ರ ಫಲಿತಾಂಶ ಪ್ರಕಟ
ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET)ಯನ್ನು ದೇಶದಾದ್ಯಂತ ಒಟ್ಟು 85 ವಿಷಯಗಳಿಗೆ ಅಭ್ಯರ್ಥಿಗಳು ಅರ್ಹತೆಯನ್ನು ಪಡೆಯಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://ugcnetjun2025.ntaonline.in/scorecard/indexಗೆ ಭೇಟಿ ನೀಡಿ. ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು UG-NET 2025ರ ಫಲಿತಾಂಶ, ಕಟ್ ಆಫ್ ಹಾಗೂ ಅಂತಿಮ ಕೀ ಉತ್ತರಗಳನ್ನು ಪರಿಶೀಲಿಸಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How to Check UGC NET June 2025 Result
UG-NET 2025ರ ಫಲಿತಾಂಶ ಪರಿಶೀಲಿಸುವ ವಿಧಾನ;
- ಅಧಿಕೃತ ವೆಬ್ಸೈಟ್ https://ugcnet.nta.ac.in/
ಗೆ ಭೇಟಿ ನೀಡಿ. - UGC NET ಜೂನ್ 2025 ಸ್ಕೋರ್‌ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅರ್ಜಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- ನಿಮ್ಮ UG-NET 2025ರ ಫಲಿತಾಂಶವನ್ನು ವೀಕ್ಷಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
Important Direct Links:
UGC NET June Result 2025 Notice PDF | Downlaod |
UGC NET June Result 2025 Cut-Off PDF | Downlaod |
UGC NET June 2025 Result Check Link | Check Now |
Official Website | ugcnet.nta.ac.in |
More Updates | KarnatakaHelp.in |