ಯುಜಿನೀಟ್ 2025ರ ಪ್ರವೇಶಾತಿ ಸಂಬಂಧ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಜು.17 ರಂದು ನೆಡೆಸಲಾಗಿದ್ದ, ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದೆ.
ಯುಜಿನೀಟ್-2025ಕ್ಕೆ ಜು.7 ರಿಂದ ಅರ್ಜಿ ಸಲ್ಲಿಸಿದ್ದ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಹಾಗೂ ಏ.15 ರಂದು ನಡೆದ ಯುಜಿಸಿಇಟಿ ಕನ್ನಡ ಭಾಷೆ ಪರೀಕ್ಷೆಗೆ ಗೈರು ಹಾಜರದ ಅಭ್ಯರ್ಥಿಗಳಿಗೂ ಜು.17ರಂದು ಬರೆಯಲು ಅವಕಾಶ ನೀಡಲಾಗಿತ್ತು. ಸದರಿ ಪರೀಕ್ಷೆಯ ಅಂಕಪಟ್ಟಿಯನ್ನು ಕೆಇಎ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ನಲ್ಲಿ ಬಿಡುಗಡೆ ಮಾಡಿದೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಯುಜಿನೀಟ್ 2025ರ ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿ ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿನೀಟ್2025ಕ್ಕೆ ಅರ್ಜಿ ಸಲ್ಲಿಸಿರುವ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆಜುಲೈ 17ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪ್ರಾಧಿಕಾರವು ಇದೀಗ ಸದರಿ ಪರೀಕ್ಷೆಯ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಂಕಪಟ್ಟಿಯನ್ನು ಪರಿಶೀಲಿಸಬಹುದು.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅರ್ಹರಾಗಲು ಗಳಿಸಬೇಕಾದ ಕನಿಷ್ಠ ಅಂಕಗಳು
ಯುಜಿಸಿಇಟಿ-2025 ಮಾಹಿತಿ ಪುಸ್ತಕದಲ್ಲಿ ತಿಳಿಸಿರುವಂತೆ, ಜು.17 ರಂದು ನಡೆದ ಕನ್ನಡ ಭಾಷಾ ಪರೀಕ್ಷೆಯು 50 ಅಂಕಗಳದ್ದಾಗಿದ್ದು, ಅಭ್ಯರ್ಥಿಗಳು ಅರ್ಹರಾಗಲು ಕನಿಷ್ಠ 12 ಅಂಕಗಳನ್ನು ಗಳಿಸಬೇಕಾಗಿರುತ್ತದೆ.
How to Download UGNEET 2025 Kannada Result List PDF?
ಯುಜಿನೀಟ್-2025ರ ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡುವ ವಿಧಾನ;
- ಕೆಇಎ ಅಧಿಕೃತ ವೆಬ್ ಸೈಟ್
https://cetonline.karnataka.gov.in/kea/ ಗೆ ಭೇಟಿ ನೀಡಿ. - ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ 18-07 UGNEET – 2025 ಕನ್ನಡ ಪರೀಕ್ಷೆಯ ಅಂಕಪಟ್ಟಿ.18/07/2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಯುಜಿನೀಟ್-2025ರ ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಅಭ್ಯರ್ಥಿಗಳು ತಮ್ಮ ಸಿಇಟಿ ನಂಬರ್ ಹಾಗೂ ಹೆಸರಿನ ಮೂಲಕ ತಾವು ಗಳಿಸಿರುವ ಅಂಕವನ್ನು ಪರಿಶೀಲಿಸಿಕೊಳ್ಳಬಹುದು.
- ಭವಿಷ್ಯದ ಉಲ್ಲೇಖಕ್ಕಾಗಿ ಅಂಕಪಟ್ಟಿಯ ಪಿಡಿಎಫ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
Important Direct Links:
UGNEET 2025 Kannada Exam Result Notice PDF | Download |
UGNEET 2025 Kannada Result List PDF | Download |
Official Website | Kea.Kar.Nic.in |
More Updates | KarnatakaHelp.in |