ಸಂಯೋಜಿತ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF)ಯ ಸಹಾಯಕ ಕಮಾಂಡೆಂಟ್ (ACs) ನೇಮಕಾತಿ ಸಂಬಂಧ ಆ.03ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕೇಂದ್ರ ಲೋಕಸೇವಾ ಆಯೋಗವು ಬಿಡುಗಡೆ ಮಾಡಿದೆ.
ಆಯೋಗವು ಮಾ.5ರಂದು ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ನೋಂದಣಿಯಾದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು UPSC ಅಧಿಕೃತ ವೆಬ್ ಸೈಟ್ https://upsconline.gov.in/eadmitcard/admitcard_capf_2025/ಗೆ ಭೇಟಿ ನೀಡಿ. ಡೌನ್ಲೋಡ್ ಮಾಡಿಕೊಳ್ಳಬಹುದು.
(CAPF) ಸಹಾಯಕ ಕಮಾಂಡೆಂಟ್ ನೇಮಕಾತಿ 2025 ಪರೀಕ್ಷಾ ದಿನಾಂಕ
ಕೇಂದ್ರ ಲೋಕಸೇವಾ ಆಯೋಗವು-2025ರ CAPF ಸಹಾಯಕ ಕಮಾಂಡೆಂಟ್ (ACs) ಹುದ್ದೆಗಳ ನೇಮಕಾತಿ ಸಂಬಂಧ ಆಗಸ್ಟ್ 03 ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಇ-ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ
UPSC ಅಧಿಕೃತ ವೆಬ್ಸೈಟ್ https://upsconline.gov.in/eadmitcard/admitcard_capf_2025/ಗೆ ಭೇಟಿ ನೀಡಿ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ACs) ಪರೀಕ್ಷೆ, 2025 – ಇ-ಅಡ್ಮಿಟ್ ಕಾರ್ಡ್ ವಿಭಾಗದ ಕೆಳಗೆ ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಮೇಲೆ ಟ್ಯಾಪ್ ಮಾಡಿ.
ನಂತರ ಹೌದು ಆಯ್ಕೆ ಕ್ಲಿಕ್ ಮಾಡಿ ಮುಂದುವರೆಯಿರಿ.
Upsc Capf 2025 Admit Card Link
ಬಳಿಕ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮಿಟ್ ಕ್ಲಿಕ್ ಮಾಡಿ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ACs) ಪರೀಕ್ಷೆ, 2025 – ಇ-ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.
ಭವಿಷ್ಯದ ಉಲ್ಲೇಖಕ್ಕಾಗಿ ಇ-ಅಡ್ಮಿಟ್ ಕಾರ್ಡ್ ಮುದ್ರಣ ತೆಗೆದುಕೊಳ್ಳಿ.