ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಖಾಲಿ ಇರುವ ಒಟ್ಟು 357 ಸಹಾಯಕ ಕಮಾಂಡೆಂಟ್‌ಗಳ (ಗ್ರೂಪ್ ಎ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(UPSC CAPF AC 2025 Notification)ಯನ್ನು ಆಯೋಗವು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಿಎಪಿಎಫ್ ಎಸಿ ಪರೀಕ್ಷೆ 2025ರ ಮೂಲಕ ಗಡಿ ಭದ್ರತಾ ಪಡೆ (BSF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಮತ್ತು ಸಶಸ್ತ್ರ ಸೀಮಾ ಬಲ (SSB)ನಲ್ಲಿ ಗ್ರೂಪ್ ಎ ಹುದ್ಧೆಗಳ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು upsconline.gov.inಗೆ ಭೇಟಿ ನೀಡಬಹುದಾಗಿದೆ. ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಕೊನೆವೆರೆಗೆ ಓದಿ ತಪ್ಪದೇ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Shortview of CAPF AC 2025 Notification
Recruitment Board – Union Public Service Commission Examination Name – Central Armed Police Forces (ACs) Examination, 2025 Post Names – Assistant Commandant Total Vacancy – 357 Application Process – Online Job Location – All India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 05ರಿಂದ ಪ್ರಾರಂಭವಾಗಿ, ಮಾರ್ಚ್ 25, 2025ರಂದು ಕೊನೆಗೊಳ್ಳಲಿದೆ.
ಶಿಕ್ಷಣದ ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Bachelor’s degree) ಪಡೆದಿರಬೇಕು.
ವಯೋಮಿತಿ:
ಆಗಸ್ಟ್ 1, 2025 ರಂತೆ ಅಭ್ಯರ್ಥಿಗಳು 20 ರಿಂದ 25 ವರ್ಷಗಳ ನಡುವಿನವರು ಅರ್ಹರು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ/ದೈಹಿಕ ದಕ್ಷತೆ ಪರೀಕ್ಷೆ, ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ, ವೈದ್ಯಕೀಯ ಮಾನದಂಡ ಪರೀಕ್ಷೆ ಮತ್ತು ಅಂತಿಮ ಆಯ್ಕೆ/ಮೆರಿಟ್ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದೆಲ್ಲ ವರ್ಗದ ಅಭ್ಯರ್ಥಿಗಳಿಗೆ – ರೂ.200/-
How to Apply for UPSC CAPF Assistant Commandant 2025