ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(UPSC)ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II) 2024 ರ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈಗಾಗಲೇ ಮೇ 15 ರಂದು ಅರ್ಜಿ ಸಲ್ಲಕೆ ಪ್ರಾರಂಭವಾಗಿದ್ದು. ಅರ್ಹ ಅಭ್ಯರ್ಥಿಗಳು UPSC CDS II 2024 ಪರೀಕ್ಷೆ(UPSC CDS 2/2024 Notification)ಗೆ ಅಧಿಕೃತ ವೆಬ್‌ಸೈಟ್‌ಗೆ upsc.gov.in ನಲ್ಲಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 4, 2024 (ಸಂಜೆ 6.00 ರವರೆಗೆ). ನೋಂದಣಿ ಪ್ರಕ್ರಿಯೆಯು ಮುಗಿದ ನಂತರ, ಜೂನ್ 5 ರಿಂದ 11 ರವರೆಗೆ ಅಪ್ಲಿಕೇಶನ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಈ ಪರೀಕ್ಷೆಯನ್ನು ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್, ಏರ್ ಫೋರ್ಸ್ ಅಕಾಡೆಮಿ ಹೈದರಾಬಾದ್, ಇಂಡಿಯನ್ ನೇವಲ್ ಅಕಾಡೆಮಿ ಎಜಿಮಲಾ, OTA ಚೆನ್ನೈ ಮತ್ತು ಇತರರಿಗೆ 459 ಹುದ್ದೆಗಳ ಭರ್ತಿಗಾಗಿ ನಡೆಸಲಾಗುತ್ತದೆ.