UPSC CDS 2 2025: ಕೇಂದ್ರ ಲೋಕಸೇವಾ ಆಯೋಗವು UPSC CDS 2 ಮೂಲಕ ಒಟ್ಟು 453 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್(UPSC CDS 2 2025 Application Form) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ಮಿಲಿಟರಿ ಅಕಾಡೆಮಿ, ಭಾರತೀಯ ನೌಕಾ ಅಕಾಡೆಮಿ, ವಾಯುಪಡೆ ಅಕಾಡೆಮಿ ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 453 – UPSC CDS 2 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ upsconline.nic.inಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Conducting Body – Union Public Service Commission (UPSC) Exam Name – UPSC CDS Examination (II), 2025 Number of Posts – 453 Application Process – Online Job Location – All India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 28-05-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -20-06-2025(Extended)
ಹುದ್ದೆಗಳ ವಿವರ:
ಭಾರತೀಯ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್ 161 (DE) ಕೋರ್ಸ್ – 100
ಭಾರತೀಯ ನೌಕಾ ಅಕಾಡೆಮಿ, ಎಜಿಮಲ ಕೋರ್ಸ್ – 26
ವಾಯುಪಡೆ ಅಕಾಡೆಮಿ, ಹೈದರಾಬಾದ್ (ಪ್ರಿ-ಫ್ಲೈಯಿಂಗ್) ತರಬೇತಿ ಕೋರ್ಸ್ – 32
ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ (ಮದ್ರಾಸ್) 124 ನೇ ಎಸ್‌ಎಸ್‌ಸಿ (ಪುರುಷರು) (ಎನ್‌ಟಿ) (ಯುಪಿಎಸ್‌ಸಿ) ಕೋರ್ಸ್ – 276
ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ (ಮದ್ರಾಸ್) 124 ನೇ ಎಸ್‌ಎಸ್‌ಸಿ ಮಹಿಳಾ (ಎನ್‌ಟಿ) (ಯುಪಿಎಸ್‌ಸಿ) ಕೋರ್ಸ್ – 19
ಒಟ್ಟು – 453 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಐಎಂಎ ಮತ್ತು ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ(Degree) ಅಥವಾ ತತ್ಸಮಾನ.
ಭಾರತೀಯ ನೌಕಾ ಅಕಾಡೆಮಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿ(Degree in Engineering).
ವಾಯುಪಡೆ ಅಕಾಡೆಮಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Degree) (10+2 ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ) ಅಥವಾ ಎಂಜಿನಿಯರಿಂಗ್ ಪದವಿ.
ಸೈನ್ಯ/ನೌಕಾಪಡೆ/ವಾಯುಪಡೆಯಲ್ಲಿ ಮೊದಲ ಆಯ್ಕೆಯ ಪದವೀಧರರು SSB ಸಂದರ್ಶನದ ಪ್ರಾರಂಭದ ದಿನಾಂಕದಂದು ಪದವಿ/ತಾತ್ಕಾಲಿಕ ಪ್ರಮಾಣಪತ್ರಗಳ ಪುರಾವೆಯನ್ನು ಸಲ್ಲಿಸಬೇಕು.
ವಯೋಮಿತಿ:
ವಾಯುಪಡೆ ಅಕಾಡೆಮಿಗೆ: ಜುಲೈ 1, 2026 ರಂತೆ 20 ರಿಂದ 24 ವರ್ಷಗಳು. (25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಯು ಅವಿವಾಹಿತರಾಗಿರಬೇಕು.)
ಐಎಂಎ(IMA)ಗೆ – ಜುಲೈ 2, 2002 ಕ್ಕಿಂತ ಮೊದಲು ಮತ್ತು ಜುಲೈ 1, 2007 ರ ನಂತರ ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಭಾರತೀಯ ನೌಕಾ ಅಕಾಡೆಮಿಗೆ – ಜುಲೈ 2, 2002 ಕ್ಕಿಂತ ಮೊದಲು ಮತ್ತು ಜುಲೈ 1, 2007 ರ ನಂತರ ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
SSB ಸಂದರ್ಶನ – (ಹಂತ -1, 2)
ಅರ್ಜಿ ಶುಲ್ಕ:
ಮಹಿಳಾ /ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಎಲ್ಲಾ ಅಭ್ಯರ್ಥಿಗಳಿಗೆ – 200 ರೂ.
How to Apply For UPSC CDS 2 Notification 2025
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/ ಗೆ ಭೇಟಿ ನೀಡಿ.
ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ. UPSC CDS (II), 2025 – ಮೇಲೆ ಟ್ಯಾಪ್ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ಅರ್ಜಿ ಶುಲ್ಕ ಪಾವತಿ ಮಾಡಿ.
ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.