ಯುಪಿಎಸ್ಸಿ: ಸಿಡಿಎಸ್ ಪರೀಕ್ಷೆ 2ರ ಪ್ರವೇಶ ಪತ್ರ ಬಿಡುಗಡೆ
ಕೇಂದ್ರ ಲೋಕಸೇವಾ ಆಯೋಗ ಸೆ.14ರಂದು ನಡೆಸಲಿರುವ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ-IIರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಬೆಳಿಗ್ಗೆ 09 ರಿಂದ 11ರವರೆಗೆ ಇಂಗ್ಲಿಷ್ ಪತ್ರಿಕೆ, ಮಧ್ಯಾಹ್ನ 12:30 ರಿಂದ 02:30 ರವರೆಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು ಸಂಜೆ 04 ರಿಂದ 06 ರವರೆಗೆ ಪ್ರಾಥಮಿಕ ಗಣಿತ ಪತ್ರಿಕೆ ಮೂರು ಪಾಳಿಯಲ್ಲಿ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಆಯೋಗದ ಜಾಲತಾಣ https://upsconline.nic.in/ದಲ್ಲಿ ಪ್ರಕಟಿಸಲಾಗಿದೆ ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ.