ಕೇಂದ್ರ ಲೋಕಸೇವಾ ಆಯೋಗ 2026ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ನೋಂದಣಿಗಾಗಿ ಬುಧವಾರ ಅಧಿಸೂಚನೆ ಬಿಡುಗಡೆಗೊಳಿಸಿದೆ.
ಐಎಎಸ್, ಐಪಿಎಸ್, ಐಪಿಎಸ್ ಸೇರಿದಂತೆ ಇತರೆ ಹುದ್ದೆಗಳ ಭರ್ತಿ ಸಂಬಂಧ ಮೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಸದರಿ ಪರೀಕ್ಷೆಯ ಮೂಲಕ ಸುಮಾರು 933 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಪದವೀಧರ ಅಭ್ಯರ್ಥಿಗಳು ಪರೀಕ್ಷೆಯ ನೋಂದಣಿಗೆ ಅರ್ಹರು. ಆಸಕ್ತರು ನೋಂದಣಿಗಾಗಿ ಆಯೋಗದ ಅಧಿಕೃತ ವೆಬ್‌ಸೈಟ್ https://upsconline.nic.in/loginಗೆ ಭೇಟಿ ನೀಡಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- ಫೆಬ್ರವರಿ 04
- ಅರ್ಜಿ ಸಲ್ಲಿಸಲು ಕೊನೆಯ ದಿನ – ಫೆಬ್ರವರಿ 24
- ಪೂರ್ವಭಾವಿ ಪರೀಕ್ಷೆಯ ದಿನಾಂಕ – ಮೇ 24, 2026
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ:
01-08-2026ರಂತೆ;
ಕನಿಷ್ಠ – 21 ವರ್ಷಗಳು, ಗರಿಷ್ಠ- 32 ವರ್ಷಗಳು
ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಪೂರ್ವಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ(ಲಿಖಿತ ಪರೀಕ್ಷೆ/ವೈಯಕ್ತಿಕ ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ)
ಸಂಬಳ:
ಸರ್ಕಾರಿ ನಿಯಮಗಳ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ಮಹಿಳಾ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹100
ಅರ್ಜಿ ಸಲ್ಲಿಕೆ ಹೀಗೆ….
ಹಂತ-1 ಅಧಿಕೃತ ವೆಬ್‌ಸೈಟ್ https://upsconline.nic.in/ಗೆ ಭೇಟಿ ನೀಡಿ.
ಹಂತ-2 ನೋಂದಣಿ ಅಥವಾ ಲಾಗಿನ್ ಮಾಡಿಕೊಳ್ಳಿ.
ಹಂತ-3 ಮುಂದೆ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | upsc.gov.in |
| More Updates | KarnatakaHelp.in |
Im lakshmi s
Im stading in BA digree complate