ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾಲಿ ಇರುವ 230 ವಿವಿಧ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗವು ಕಿರು ಅಧಿಸೂಚನೆ(UPSC EPFO EO AO Notification 2025)ಯನ್ನು ಹೊರಡಿಸಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಜಾರಿ ಅಧಿಕಾರಿ (EO) /ಖಾತೆ ಅಧಿಕಾರಿ (AO) ಹಾಗೂ ಭವಿಷ್ಯ ನಿಧಿ ಆಯುಕ್ತರ (APFC) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆಯು ಜು.29ರಿಂದ ಪ್ರಾರಂಭವಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು UPSC ಅಧಿಕೃತ ವೆಬ್ಸೈಟ್ https://upsc.gov.in/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 29,2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 18, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ಇನ್ನೂ ಕೆಲವೇ ದಿನಗಳಲ್ಲಿ ವಿಸ್ತೃತ ಮಾಹಿತಿ ಇರುವ ಅಧಿಸೂಚನೆ ಬಿಡುಗಡೆಯಾಗಲಿದ್ದು, ಏನಾದರು ಬದಲಾವಣೆಗಳಿದ್ದಲ್ಲಿ ನವೀಕರಿಸಲಾಗುತ್ತದೆ.
ವಯೋಮಿತಿ:
01-08-2025 ರಂತೆ;
ಜಾರಿ ಅಧಿಕಾರಿ (EO)/ಖಾತೆ ಅಧಿಕಾರಿ (AO) ಹುದ್ದೆಗೆ – ಗರಿಷ್ಠ ಮಿತಿ – 40 ವರ್ಷಗಳು (ಸಾಮಾನ್ಯ/ಇಡಬ್ಲ್ಯೂ ಎಸ್-30, ಒಬಿಸಿ-33, ಎಸ್ಸಿ/ಎಸ್ಟಿ-35, ಪಿಡಬ್ಯ್ಲೂಡಿ-40)
ಭವಿಷ್ಯ ನಿಧಿ ಆಯುಕ್ತರ (APFC) ಹುದ್ದೆಗೆ – ಗರಿಷ್ಠ ಮಿತಿ – 45 ವರ್ಷಗಳು (ಸಾಮಾನ್ಯ/ಇಡಬ್ಲ್ಯೂ ಎಸ್-35, ಒಬಿಸಿ-38, ಎಸ್ಸಿ/ಎಸ್ಟಿ-40, ಪಿಡಬ್ಯ್ಲೂಡಿ-45)
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
- ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 200 ರೂ.
- ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply for UPSC EPFO Recruitment 2025
ಅರ್ಜಿ ಸಲ್ಲಿಸುವ ವಿಧಾನ;
- UPSC ಅಧಿಕೃತ ವೆಬ್ಸೈಟ್ https://upsconline.nic.in/ಗೆ ಭೇಟಿ ನೀಡಿ.
- ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಓಟಿಪಿ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
- ನಂತರ UPSC EPFO (EO/AO) ಅರ್ಜಿ ನಮೂನೆ- 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Employment News Short Notice PDF | Download |
Official Notification PDF | Soon |
Online Application Form Link(ಜು.29 ರಿಂದ) | Soon |
Official Website | upsc.gov.in |
More Updates | KarnatakaHelp.in |
2a