ಕೇಂದ್ರ ಲೋಕಸೇವಾ ಆಯೋಗವು (UPSC) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (I), 2025ರ ಅಂತಿಮ ಫಲಿತಾಂಶವನ್ನು ಅ.10 ರಂದು ಬಿಡುಗಡೆ ಮಾಡಿದೆ.
ಏಪ್ರಿಲ್ 13, 2025ರಂದು ನಡೆಸಲಾದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಂತಿಮವಾಗಿ SSB ಸಂದರ್ಶನವನ್ನು ನಡೆಸಲಾಗಿತ್ತು. ಇದೀಗ ಸದರಿ ಸಂದರ್ಶನದ ಆಧಾರದ ಮೇಲೆ ಅರ್ಹತೆ ಪಡೆದ 735 ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು UPSC ಅಧಿಕೃತ ವೆಬ್ಸೈಟ್ http://www.upsc.gov.in ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.
• UPSC ಅಧಿಕೃತ ವೆಬ್ಸೈಟ್ http://www.upsc.gov.in ಗೆ ಭೇಟಿ ನೀಡಿ.
• ನಂತರ ಹೊಸದೇನಿದೆ ವಿಭಾಗದ ಕೆಳಗೆ ನೀಡಲಾಗಿರುವ “ಅಂತಿಮ ಫಲಿತಾಂಶ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (I), 2025” – ಎಂಬ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ.
• ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕ ಅಕಾಡೆಮಿ ಪರೀಕ್ಷೆ – I , 2025 – ಅಂತಿಮ ಫಲಿತಾಂಶ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ.
• UPSC NDA – I ಫಲಿತಾಂಶವೂ ಪಿಡಿಎಫ್ ರೂಪದಲ್ಲಿ ಕಾಣಿಸಿತ್ತದೆ.
• ಪಿಡಿಎಫ್ ನಲ್ಲಿ ನಿಮ್ಮ ಹೆಸರು ಅಥವಾ ರೋಲ್ ಸಂಖ್ಯೆಯ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.
• ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
I have intersted to do this work and like to serve our nation