ಕೇಂದ್ರ ಲೋಕಸೇವಾ ಆಯೋಗವು UPSC NDA 2 – ಒಟ್ಟು 406 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇನಾ ವಿಭಾಗ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಾಯುಪಡೆ ಮತ್ತು ನೌಕಾ ವಿಭಾಗ ಹಾಗೂ ಇತರೆ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 406 UPSC NDA 2 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ upsconline.nic.inಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Conducting Body – Union Public Service Commission (UPSC) Exam Name – UPSC NDA Examination (II), 2025 Total Posts – 406 Application Process – Online Job Location – All India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 28-05-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -20-06-2025(Extended)
ಹುದ್ದೆಗಳ ವಿವರ:
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಸೇನಾ ವಿಭಾಗಕ್ಕೆ – 208 ( 10 ಮಹಿಳಾ ಅಭ್ಯರ್ಥಿಗಳು ಸೇರಿದಂತೆ)
ನೌಕಾಪಡೆ ವಿಭಾಗದಲ್ಲಿ – 42 ( 5 ಮಹಿಳಾ ಅಭ್ಯರ್ಥಿಗಳು ಸೇರಿದಂತೆ)
ವಾಯುಪಡೆ ವಿಭಾಗದಲ್ಲಿ – ಫ್ಲೈಯಿಂಗ್- 92 (ಮಹಿಳಾ ಅಭ್ಯರ್ಥಿಗಳು 2 ಸೇರಿದಂತೆ)
ಗ್ರೌಂಡ್ ಡ್ಯೂಟೀಸ್ (ಟೆಕ್)-18 ( 2 ಮಹಿಳಾ ಅಭ್ಯರ್ಥಿಗಳು ಸೇರಿದಂತೆ)
ಗ್ರೌಂಡ್ ಡ್ಯೂಟೀಸ್ (ಟೆಕ್ನಾಲಜಿಯೇತರ) (2 ಮಹಿಳಾ ಅಭ್ಯರ್ಥಿಗಳು ಸೇರಿದಂತೆ)
ನೌಕಾ ಅಕಾಡೆಮಿ 10+2 ಕೆಡೆಟ್ ಪ್ರವೇಶ ಯೋಜನೆಯಲ್ಲಿ – 36 (4 ಮಹಿಳಾ ಅಭ್ಯರ್ಥಿಗಳು ಸೇರಿದಂತೆ)
ಒಟ್ಟು – 406 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
• ರಾಷ್ಟ್ರೀಯ ರಕ್ಷಣಾ ವಿಭಾಗಕ್ಕೆ – 10+2 ಮಾದರಿಯ ಶಾಲಾ ಶಿಕ್ಷಣ ಅಥವಾ ರಾಜ್ಯ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯವು ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ 12ನೇ(2nd PUC) ತರಗತಿ ಉತ್ತೀರ್ಣರಾಗಿರಬೇಕು.
• ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಾಯುಪಡೆ ಮತ್ತು ನೌಕಾ ವಿಭಾಗಗಳಿಗೆ ಮತ್ತು ಭಾರತೀಯ ನೌಕಾ ಅಕಾಡೆಮಿಯಲ್ಲಿ 10+2 ಕೆಡೆಟ್ ಪ್ರವೇಶ ಯೋಜನೆಗೆ – ರಾಜ್ಯ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ನಡೆಸಲ್ಪಡುವ 10+2 ಶಾಲಾ ಶಿಕ್ಷಣ ಮಾದರಿಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು.