ಕೇಂದ್ರ ಲೋಕ ಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA) ಮತ್ತು ನೌಕಾ ಅಕಾಡೆಮಿ(NA) II ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತೀಯ ಸಶಸ್ತ್ರ ಪಡೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕ ಸೇವಾ ಆಯೋಗವು ಪ್ರತಿ ವರ್ಷ 2 ಬಾರಿ NDA ಪರೀಕ್ಷೆಯನ್ನು ದೇಶಾದ್ಯಂತ ನಡೆಸುತ್ತದೆ. ಪ್ರಸ್ತುತ ಆಯೋಗವು 2025ರ ಮೇ 28 ರಂದು ಒಟ್ಟು 406 ಹುದ್ದೆಗಳ ನೇಮಕಾತಿಗೆ ಅಧಿಸೂಚಿಸಲಾದ NDA & ನೌಕಾ ಅಕಾಡೆಮಿ (NA) II ಪರೀಕ್ಷೆಯ ವೇಳಾಪಟ್ಟಿಯನ್ನು ಯುಪಿಎಸ್ಸಿ ಅಧಿಕೃತ ವೆಬ್ ಸೈಟ್ https://upsc.gov.in/ ನಲ್ಲಿ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕವನ್ನು ಪರಿಶೀಲಿಸಬಹುದು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ನೌಕಾ ಅಕಾಡೆಮಿ (NA) II ಲಿಖಿತ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿ ಸೆಪ್ಟೆಂಬರ್ 14ರ ಭಾನುವಾರದಂದು ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಮೊದಲನೇ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ಗಣಿತ ವಿಷಯ ಹಾಗೂ ಎರಡನೇ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಗಣಿತ ವಿಷಯ ಪತ್ರಿಕೆಯು 300 ಅಂಕಗಳನ್ನು ಒಳಗೊಂಡಿದ್ದರೆ, ಸಾಮಾನ್ಯ ಸಾಮರ್ಥ್ಯ ಪತ್ರಿಕೆಯು 600 ಅಂಕಗಳನ್ನು ಒಳಗೊಂಡಿರುತ್ತದೆ.
How to Download UPSC NDA NA 2 Exam Schedule 2025
ಪರೀಕ್ಷಾ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ;
• ಯುಪಿಎಸ್ಸಿ ಅಧಿಕೃತ ವೆಬ್ ಸೈಟ್ https://upsc.gov.in/ಗೆ ಭೇಟಿ ನೀಡಿ.
• ಹೊಸದೇನಿದೆ ವಿಭಾಗದಲ್ಲಿ “ಪರೀಕ್ಷಾ ವೇಳಾಪಟ್ಟಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (II), 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ದಿನಾಂಕವನ್ನು ಪರಿಶೀಲಿಸಿಕೊಳ್ಳಿ.