ಪ್ರಸಕ್ತ ಸಾಲಿನ ವಿದ್ಯಾಧನ್ ವಿದ್ಯಾರ್ಥಿವೇತ(Vidyadhan Scholarship 2025)ನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರೋಜಿನಿ ದಾಮೋದರನ್ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣವನ್ನು ಬೆಂಬಲಿಸಲು ವಿದ್ಯಾಧನ್ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ವಿದ್ಯಾಧನ್ ವಿದ್ಯಾರ್ಥಿವೇತನವನ್ನು 10ನೇ ತರಗತಿ /ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವ್ಯಾಸಂಗಕ್ಕಾಗಿ (11 ನೇ ಮತ್ತು 12 ನೇ ತರಗತಿಗಳಿಗೆ) ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಪರೀಕ್ಷೆ ಮತ್ತು ಸಂದರ್ಶನ ಸೇರಿದಂತೆ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ. ಆಯ್ಕೆಯಾದ ವಿದ್ಯಾರ್ಥಿಯ ಆಸಕ್ತಿಯ ಯಾವುದೇ ಪದವಿ ಕೋರ್ಸ್ ಅನ್ನು ಮುಂದುವರಿಸಲು ಎರಡು ವರ್ಷಗಳ ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಪ್ರಸ್ತುತ ವಿದ್ಯಾಧನ್ ಕಾರ್ಯಕ್ರಮವು ಕೇರಳ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಒಡಿಶಾ, ನವದೆಹಲಿ, ಲಡಾಖ್, ಬಿಹಾರ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಒಟ್ಟು 8000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನದ ಮೊತ್ತವು ರಾಜ್ಯ, ಕೋರ್ಸ್, ಅವಧಿ ಇತ್ಯಾದಿಗಳನ್ನು ಅವಲಂಬಿಸಿ ವರ್ಷಕ್ಕೆ 10,000 ರೂ. – 75,000 ರೂ. ವರೆಗೆ ಬದಲಾಗುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08-07-2025
ಸ್ಕ್ರೀನಿಂಗ್ ಟೆಸ್ಟ್ ದಿನಾಂಕ – 27-07-2025
2025 ರ ಆಗಸ್ಟ್ 9 ರಿಂದ ಆಗಸ್ಟ್ 24 ರವರೆಗೆ ಸಂದರ್ಶನ/ಪರೀಕ್ಷೆಗಳನ್ನು ನಿಗದಿಪಡಿಸಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಲಾದ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:
ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
2025 ನೇ ಸಾಲಿನಲ್ಲಿ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಥವಾ 9 CGPA (ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು 75% ಅಥವಾ 7 CGPA) ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
10 ನೇ ತರಗತಿ ಅಂಕಪಟ್ಟಿ,
ಆದಾಯ ಪ್ರಮಾಣಪತ್ರ
ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯತೆ ಇದ್ದರೆ ಮಾತ್ರ)
How to Apply for Vidyadhan Scholarship 2025
ಅರ್ಜಿ ಸಲ್ಲಿಸುವ ವಿಧಾನ;
SDF ವಿದ್ಯಾಧನ್ ವೆಬ್ಸೈಟ್ https://www.vidyadhan.org/register/student ಗೆ ಭೇಟಿ ನೀಡಿ.
ಹೆಸರು ಇ-ಮೇಲ್ ವಿಳಾಸ ನಮೂದಿಸಿ ವಿದ್ಯಾರ್ಥಿ ನೋಂದಣಿ ಪೂರ್ಣಗೊಳಿಸಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನೀವು ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಮತ್ತು ಸಲ್ಲಿಸಿದ ನಂತರ, ನೀವು ಸಲ್ಲಿಕೆ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಪಡೆಯುತ್ತೀರಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ:
ಇ-ಮೇಲ್ vidyadhan.karnatal ಅಥವಾ ಸಹಾಯವಾಣಿ ಸಂಖ್ಯೆ 918068333500 ಅನ್ನು ಸಂಪರ್ಕಿಸಬಹುದು.
Important Direct Links:
Vidyadhan Scholarship Online Application Form 2025