ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣ ನಿರ್ದೇಶಕರ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC)ದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಲಿ ಇರುವ ಒಂದು ವಿಮಾನ ನಿಲ್ದಾಣ ನಿರ್ದೇಶಕ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.6 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.98458 33566ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಮುಖ್ಯವಾಗಿ ಬಿಸಿನೆಸ್, ಏವಿಯೇಷನ್ ಅಡ್ಮಿನಿಸ್ಟೇಷನ್/ಇಂಜಿನಿಯರಿಂಗ್ನಲ್ಲಿ ಪದವಿ ಅಥವಾ ತತ್ಸಂಬಂಧಿತ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು.
ವೃತ್ತಿ ಅನುಭವ:
ಕಾರ್ಯನಿರ್ವಾಹಕ, ವೃತ್ತಿಪರ ಮಟ್ಟದಲ್ಲಿ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.
ಸ್ವೀಕಾರಾರ್ಹ ಚಾಲನಾ ದಾಖಲೆಯೊಂದಿಗೆ ಎಲ್ಎಂವಿ/ಹೆಚ್ಎಂವಿಚಾಲನಾ ಪರವಾನಗಿ ಹೊಂದಿರಬೇಕು.
ಪೈಲೆಟ್ ಪರವಾನಗಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳಲ್ಲಿ ಪರಿಣಿತಿ ಹೊಂದಿರಬೇಕು:
• ಡಿಜಿಸಿಎ ಅನ್ವಯ ವಿಮಾನ ಸುರಕ್ಷತಾ ದಾಖಲಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು, ಕಾನ್ಸೆಪ್ಟ್ ಡಿಸೈನ್ ಏರ್ಸೈಡ್ ಇನ್ಫ್ರಾಸ್ಟ್ರಕ್ಚರ್, ಟರ್ಮಿನಲ್ ಸಿಸ್ಟಮ್ಸ್, ಲ್ಯಾಂಡ್ ಸೈಡ್ ಫೆಸಿಲಿಟಿಗಳಲ್ಲಿ ತಿಳುವಳಿಕೆ.
• ಗ್ರೌಂಡ್ ಟ್ರಾನ್ಸ್ಪೋರ್ಟೇಷನ್ ಟರ್ಮಿನಲ್ ಮತ್ತು ಏರ್ಸೈಡ್ ಆಪರೇಷನ್ಗಳ ಸಮೀಕರಣ, ಏರೋಸ್ಪೇಸ್ ಡೊಮೈನ್ನಲ್ಲಿ ಸಿಸ್ಟಮ್ಸ್ ಸೇಫ್ಟಿ ರಿಕ್ವೆರ್ಮೆಂಟ್ನ ಪರಿಶೀಲನೆ ಮತ್ತು ಅಭಿವೃದ್ಧಿ, ಏರ್ಟ್ರಾಫಿಕ್ ಕಂಟ್ರೋಲ್ ಕಾರ್ಯವಿಧಾನದ ಕಾರ್ಯನಿರ್ವಹಣೆ ಬಗ್ಗೆ ತಿಳಿದಿರಬೇಕು.
• ಡಿಜಿಸಿಎ ಒಪ್ಪಿಗೆ ಪಡೆದ ನಂತರ ವಿಮಾನ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆ ಕೈಪಿಡಿಗಳು, ಪರಿಷ್ಕರಣೆ ತಿದ್ದುಪಡಿಗಳನ್ನು ಏಕೀಕರಣಗೊಳಿಸುವುದು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 55 ವರ್ಷಗಳು
ಸಂಬಳ:
ಮಾಸಿಕ 1,25,000ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ವಿದ್ಯಾರ್ಹತೆ ಮತ್ತು ಅನುಭವದ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ಸೆಪ್ಟೆಂಬರ್ 6 ರೊಳಗೆ ಖುದ್ದಾಗಿ ಭೇಟಿ ನೀಡಬಹುದು.
ವಿಳಾಸ: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ),ನಂ.49, 4ನೇ ಮಹಡಿ, ಪೂರ್ವ ಭಾಗ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು – 560001