ಕಾನೂನು ಪ್ರವೇಶ ಪರೀಕ್ಷೆ(CLAT) ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನ

Published on:

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಕಾಮನ್ ಲಾ ಅಡ್ಮಿಷನ್ ಟೆಸ್ಟ್(CLAT) ಪರೀಕ್ಷಾ ಪೂರ್ವ ತರಬೇತಿ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ(UG) ಮತ್ತು ಸ್ನಾತಕೋತ್ತರ (PG) ಕಾನೂನು ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ನಡೆಸಲಾಗುವ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಕಾಮನ್ ಲಾ ಅಡ್ಮಿಷನ್ ಟೆಸ್ಟ್(CLAT) ಪರೀಕ್ಷಾ ಪೂರ್ವ ಆನ್‌ಲೈನ್ ತರಬೇತಿ ಪಡೆಯಲು ಇಚ್ಛಿಸುವ ಪ.ಜಾತಿಯ ವಿದ್ಯಾರ್ಥಿಗಳು ಸೆಪ್ಟೆಂಬರ್ 20ರೊಳಗೆ https://swdservices.karnataka.gov.in/petccoaching/CLATHome.aspxಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಆಗಸ್ಟ್ 20, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 20, 2025

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದೊಳಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಸ್ತುತ ಸಾಲಿನಲ್ಲಿ ಪ್ರಥಮ ಪಿಯುಸಿ /11ನೇ ತರಗತಿಗೆ ವ್ಯಾಸಂಗ ಮಾಡುತ್ತಿರಬೇಕು.

ವಯೋಮಿತಿ:

20-09-2025 ರಂತೆ;

  • ಕನಿಷ್ಠ ವಯಸ್ಸಿನ ಮಿತಿ – 15 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ – 18 ವರ್ಷಗಳು

ತರಬೇತಿಯ ವಿವರ:

2025-26ರಲ್ಲಿ ಪ್ರಥಮ ಪಿಯುಸಿ/11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸದರಿ ವಿದ್ಯಾರ್ಥಿಗಳು 2026-27 ನೇ ಸಾಲಿಗೆ ಮುಂದುವರೆದು ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನುರಿತ ತರಬೇತಿ ಸಂಸ್ಥೆಯಿಂದ (ತರಬೇತಿಯ ಅವಧಿ 500 ಗಂಟೆಗಳು 2025-26 ರಿಂದ 2026-27ರವರೆಗೆ ) CLAT ಪರೀಕ್ಷಾ ಪೂರ್ವ ಆನ್‌ಲೈನ್ ತರಬೇತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

  • ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
  • ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಮೀರಿರಬಾರದು.

ಆಯ್ಕೆ ವಿಧಾನ:

ಮೊದಲು ಅರ್ಜಿ ಸಲ್ಲಿಸದವರಿಗೆ ಪ್ರಥಮ ಆದ್ಯತೆ ಅನ್ವಯ ಆಯ್ಕೆ ಮಾಡಲಾಗುತ್ತದೆ.

ತರಬೇತಿಯ ನಿಯಮಗಳು ಮತ್ತು ಷರತ್ತುಗಳು

• ತರಬೇತಿ ಸಂಸ್ಥೆ, ಅಧ್ಯಾಪಕ ಸದಸ್ಯರು ಅಥವಾ ಬೋಧಕರ ಕಡೆಗೆ ಅವಿಧೇಯತೆ ಅಥವಾ ದುರ್ನಡತೆ ಪ್ರದರ್ಶಿಸುವ ಯಾವುದೇ ಅಭ್ಯರ್ಥಿಯನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.

• ಅಭ್ಯರ್ಥಿಯು ಎರಡು ವರ್ಷಗಳ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಪರೀಕ್ಷೆಯನ್ನು ನಡೆಸಿ, ಅದರ ಫಲಿತಾಂಶದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಇಲಾಖೆಯು ಹೊಂದಿದೆ.

• ಅಭ್ಯರ್ಥಿಯು ಕಡ್ಡಾಯವಾಗಿ ಪ್ರಥಮ ಪಿಯುಸಿ/11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

• ಅಭ್ಯರ್ಥಿಯು ತರಬೇತಿಯ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕು ಮತ್ತು ತರಬೇತಿಯ ವೇಳಾಪಟ್ಟಿಯನ್ನು ನಿರ್ವಹಿಸಬೇಕು.

How to Apply for SW IGCCD Free CLAT Exam Training 2025

ಅರ್ಜಿ ಸಲ್ಲಿಸುವ ವಿಧಾನ;

  • ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಅಧಿಕೃತ https://swdservices.karnataka.gov.in/petccoaching/CLATHome.aspx ಜಾಲತಾಣಕ್ಕೆ ಭೇಟಿ ನೀಡಿ.
  • CLAT ಪರೀಕ್ಷೆಗೆ ಪೂರ್ವ-ಪರೀಕ್ಷಾ ಆನ್‌ಲೈನ್ ತರಬೇತಿಗಾಗಿ ಅರ್ಜಿ ವಿಭಾಗದ ಕೆಳಗೆ ನೀಡಲಾಗಿರುವ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಹಾಗೂ ಕ್ಯಾಪ್ಚ ನಮೂದಿಸಿ ಮುಂದುವರೆಯಿರಿ.
  • ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
  • ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websiteswdservices.karnataka.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment