ಯುಜಿಸಿಇಟಿ/ನೀಟ್ 2025; ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಮುಂತಾದ ವಿವಿಧ ಕೋರ್ಸುಗಳ ಪ್ರವೇಶಾತಿ ಸಂಬಂಧ ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ.

ಆ.26ರ ಮಧ್ಯಾಹ್ನ 1ರವೆರೆಗೆ ನಮೂದಿಸಲಾದ ಆಯ್ಕೆಗಳನ್ನು ಎರಡನೇ ಸುತ್ತಿಗೆ ಪರಿಗಣಿಸಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಸದರಿ ಫಲಿತಾಂಶ ಮತ್ತು ಕಟ್‌-ಆಫ್‌ ಪಟ್ಟಿಯನ್ನು ಕೆಇಎ ಅಂತರ್ಜಾಲ https://cetonline.karnataka.gov.in/kea/ದ ಮೂಲಕ ಪರಿಶೀಲಿಸಬಹುದು. ಯಾವುದಾದರೂ ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಆ.30ರೊಳಗೆ keauthority-ka@nic.in ಇ-ಮೇಲ್‌ ಮೂಲಕ ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

How to Check UGCET, UGNEET 2nd Round Seat allotment Provisional Result 2025

ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪರಿಶೀಲಿಸುವುದು ಹೇಗೆ;

• KEA ಅಧಿಕೃತ https://cetonline.karnataka.gov.in/kea/ ಜಾಲತಾಣಕ್ಕೆ ಭೇಟಿ ನೀಡಿ.

• ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ ಯುಜಿಸಿಇಟಿ 2025 ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶದ ಲಿಂಕ್.29-08-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಸಿಇಟಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲಿಸಿ.

Important Direct Links:

UGCET UGNEET 2nd Round Seat allotment Provisional Result 2025 Notice PDFDownload
UGCET UGNEET 2nd Round Seat allotment Provisional Result 2025 LinkCheck Now
Official Websitekea.kar.nic.in
More UpdatesKarnataka Help.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “ಯುಜಿಸಿಇಟಿ/ನೀಟ್ 2025; ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

Leave a Comment