Non Veg Food: ಶ್ರಾವಣ ಮಾಸದಲ್ಲಿ ನಾನ್‌ವೆಜ್‌ ತಿನ್ನಬಾರದು ಅನ್ನೋದ್ಯಾಕೆ?

Published on:

ಫಾಲೋ ಮಾಡಿ
ಶ್ರಾವಣ ಮಾಸದಲ್ಲಿ ನಾನ್‌ವೆಜ್‌ ತಿನ್ನಬಾರದು ಅನ್ನೋದ್ಯಾಕೆ?
ಶ್ರಾವಣ ಮಾಸದಲ್ಲಿ ನಾನ್‌ವೆಜ್‌ ತಿನ್ನಬಾರದು ಅನ್ನೋದ್ಯಾಕೆ?

ಶ್ರಾವಣ ಮಾಸ ಅಂದ್ರೆ ಮಳೆಯಾಗುವ ಸಮಯ. ತಂಪಾದ ಗಾಳಿ ಮತ್ತು ಮಳೆಯು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ವಾತಾವರಣ ಹೆಚ್ಚುಆರ್ದ್ರತೆಯಿಂದ ಕೂಡಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಈ ವಾತಾವರಣದಲ್ಲಿ ಬೇಗ ಬೆಳೆಯುತ್ತವೆ. ಹೀಗಾಗಿ ಇದು ಸೋಂಕು, ಫುಡ್‌ ಪಾಯ್ಸನ್‌, ಅತಿಸಾರ ಮತ್ತು ಅಜೀರ್ಣದಂತಹ ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಆರ್ದ್ರತೆಯು ಜೀರ್ಣಕ್ರಿಯೆಯ (Digestion) ಮೇಲೆ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರಿ ಆಹಾರಗಳು ಮತ್ತು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ.

ಹಿಂದೂ ಸಂಪ್ರದಾಯದ (Hindu religion) ಪ್ರಕಾರ, ಪ್ರಾಣಿಗಳ ಸಂತಾನವೃದ್ಧಿ ಕಾಲದಲ್ಲಿ ಅವುಗಳನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಮಾನ್ಸೂನ್ ಅನೇಕ ಪ್ರಾಣಿಗಳಿಗೆ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ, ಈ ಅವಧಿಯಲ್ಲಿ ಮಾಂಸಾಹಾರಿ ಮತ್ತು ಮೊಟ್ಟೆಗಳನ್ನು ತಪ್ಪಿಸಲು ಸೂಚಿಸಲಾಗುತ್ತದೆ.

About the Author

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದು ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.‌ ಸದ್ಯ ಪಿಎಚ್.ಡಿ ಮಾಡುತ್ತಿದ್ದಾರೆ. 4 ವರ್ಷ ಪ್ರಿಲೈನ್ಸ್ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಯಕ್ಷಗಾನ, ನಾಟಕ, ಬರವಣಿಗೆ ಆಸಕ್ತಿ ವಿಷಯಗಳು.

Leave a Comment