Widow Pension Scheme: ನಮಸ್ಕಾರ ಬಂಧುಗಳೇ ಈ ಲೇಖನದಲ್ಲಿ ನಾವು ವಿಧವಾ ವೇತನ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
ಇಂದಿನ ಸಮಾಜದಲ್ಲಿ ಸ್ತ್ರೀ ಪುರುಷರ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸಮಾಜದಲ್ಲಿ ಮಹಿಳೆಯರನ್ನು ಪ್ರಮುಖ ವಾಹಿನಿಗೆ ತರಲು ಸಹಕಾರ ನೀಡುತ್ತವೆ. ಉದ್ಯೋಗ ಶಿಕ್ಷಣ ಇನ್ನಿತರ ವಿಭಾಗಗಳಲ್ಲಿ ಮಹಿಳಾ ಮೀಸಲಾತಿ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ, ವಿಧವೆಯರಿಗೆ, ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಇದೇ ನಿಟ್ಟಿನಲ್ಲಿ ವಿದುವೆ ಆಗಿರುವ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಭದ್ರತೆ ನೀಡುವ ಸಲುವಾಗಿ ವಿಧವಾ ವೇತನ ಯೋಜನೆ (Widow wage Scheme) ಜಾರಿಗೊಳಿಸಿದ್ದು, ಯೋಜನೆಯಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿನ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ಮಹಿಳೆಯರಿಗೆ ಮಾಸಿಕವಾಗಿ 800 ರೂ ವಿಧವಾ ವೇತನ ನೀಡಲಾಗುತ್ತದೆ. ಯೋಜನೆಯನ್ನು 1ನೇ ಏಪ್ರಿಲ್ 1984 ರಲೇ ಪ್ರಾರಂಭಿಸಲಾಗಿದ್ದು, ಅರ್ಜಿಗಳ ಸಲ್ಲಿಕೆಗೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ. ಅರ್ಹ ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಯೋಜನೆಯ ಮಾನದಂಡಗಳು ಮತ್ತು ಅಗತ್ಯವಿರುವ ದಾಖಲಾತಿಗಳ ಬಗ್ಗೆ ಈ ಕೆಳಗಿನ ನೀಡಲಾಗಿದೆ.
Widow Pension Scheme
ಈ ಯೋಜನೆಗೆ ಅರ್ಹತೆಗಳು ಯಾವ್ಯಾವು….?
ಪತಿ ಇಲ್ಲದವರು (ವಿಧವೆ) ಆಗಿರುವ ಮಹಿಳೆಯರಿಗೆ ಮಾತ್ರ.
ಈ ಯೋಜನೆ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ 12,000 ಹಾಗೂ ನಗರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ 17000 ಕ್ಕಿಂತ ಕಡಿಮೆ ಆದಾಯ ಇರಬೇಕು.
ಸರ್ಕಾರದ ಬೇರೆ ಯಾವುದೇ ಪಿಂಚಣಿ ಪಡೆಯುತ್ತಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
ವಿಧವೆಯಾಗಿ ಎರಡನೇ ಮದುವೆ ಆಗಿರುವ ಮಹಿಳೆಯರಿಗೆ ಯೋಜನೆ ಅನ್ವಯವಾಗುವುದಿಲ್ಲ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು (Documents Required)
ವಿಳಾಸ ದೃಢೀಕರಣ ಪತ್ರ
ಪತಿಯ ಮರಣ ಪ್ರಮಾಣ ಪತ್ರ
ವಯಸ್ಸಿನ ದೃಢೀಕರಣ ಪತ್ರ
ಆದಾಯ ಪ್ರಮಾಣ ಪತ್ರ
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಈ ಮೇಲಿನ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಬೇಕಾಗುತ್ತದೆ.
How to Apply for Widow Pension Scheme
ಅರ್ಜಿ ಸಲ್ಲಿಕೆ ಹೇಗೆ..?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಗ್ರಾಮ ಅಥವಾ ನಗರಗಳ ವ್ಯಾಪ್ತಿಗೆ ಬರುವ ನಾಡ ಕಚೇರಿ, ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಪಡೆದು ಆ ಅರ್ಜಿ ಗೆ ಬೇಕಾದ ಮಾಹಿತಿ ಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಹಾಗೂ www.nadakacheri.karnataka.gov.in ಇಲ್ಲಿ ಬೇಕಾದ ದಾಖಲೆ ನಮೂದಿಸಿ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.