ಯಾದಗಿರಿ: ಜಿಲ್ಲಾ ಕೃಷಿ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ರಾಜ್ಯ ವಲಯ ಕೃಷಿ ಯಾಂತ್ರಿಕರಣ ಯೋಜನೆಯಡಿ “ಹೈಟೆಕ್ ಹಾರ್ವೆಸ್ಟರ್ ಹಬ್” ಸ್ಥಾಪನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀ ರತೇಂದ್ರನಾಥ ಸೂಗೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 02 (ಸಾಮಾನ್ಯ ವರ್ಗದಡಿ 01, ವಿಶೇಷ ಘಟಕ ಯೋಜನೆಯಡಿ 01) ಕಂಬೈನ್ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಸಾಮಾನ್ಯ ವರ್ಗದಡಿ ಗರಿಷ್ಠ ಶೇ.50 ರಂತೆ ಹಾಗೂ ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಗರಿಷ್ಠ ಶೇ.70ರಂತೆ ಸಹಾಯಧನ ಒದಗಿಸಲಾಗುತ್ತದೆ. ಸಹಾಯಧನವನ್ನು ಕ್ರೆಡಿಟ್ ಲಿಂಕ್ಡ್ ಬ್ಯಾಕ್-ಎಂಡೆಡ್ ಸಬ್ಸಿಡಿ(ಸಿಎಲ್‌ಬಿಇಎಸ್) ಮುಖಾಂತರ ನೀಡಲಾಗುವುದು. ಆಯ್ಕೆಯಾದ ಫಲಾನುಭವಿಗಳು ಕೃಷಿ ಮೂಲಭೂತ ಸೌಕರ್ಯನಿಧಿ(ಎಐಎಫ್) ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ.
ಆಸಕ್ತರು ಯಾದಗಿರಿ ಜಿಲ್ಲಾಡಳಿತದ ಅಧಿಕೃತ ಜಾಲತಾಣ Yadgir.nic.in ಅಥವಾ ಜಿಲ್ಲಾ ಪಂಜಾಯತ್ ಜಾಲತಾಣ zpyadgiri.karnataka.gov.inದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಸಲ್ಲಿಸಿ, ಅರ್ಜಿ ಸಲ್ಲಿಕೆ ಪ್ರತಿ ಜೊತೆಗೆ ಅಗತ್ಯ ದಾಖಲೆ ಲಗತ್ತಿಸಿ ಆಗಸ್ಟ್ 31ರೊಳಗೆ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಅಗತ್ಯ ದಾಖಲೆಗಳು
- ಫಲಾನುಭವಿಯ ಫೋಟೋ
- ಚುನಾವಣಾ ಗುರುತಿನ ಚೀಟಿ(ವೋಟರ್ ಐಡಿ)
- ಪ್ರಸ್ತುತ ಸಾಲಿನ 2026 ಜನವರಿ ನಂತರದ ಪಹಣಿ
- ಬ್ಯಾಂಕ್ ಪಾಸ್‌ಬುಕ್
- ಜಾತಿ ಪ್ರಮಾಣ ಪತ್ರ
- ರೂ. 20/- ಗಳ ಛಾಪಾ ಕಾಗದ ಮೇಲೆ(ಅನುಬಂಧ 7) ರಂತೆ ಘೋಷಣೆ ಪತ್ರ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಅವರು ಕೋರಿದ್ದಾರೆ.
Important Direct Links:
| Yadgir Agriculture Deparment Hi-Tech Harvester Hub Online Application 2026-27 Link | Apply Now |
| Annexure-7/ಅನುಭಂದ-7(ಘೋಷಣಾ ಪ್ರಮಾಣ ಪತ್ರ) PDF | Download |
| Official Website | yadgir.nic.in |
| More Updates | KarnatakaHelp.in |
Ward.namber.03.prucamp.mudapurapostmuddapura.no.10kampli.DIST:583132