ಭಾರತೀಯ ಸೇನೆಯು ಎನ್‌ಸಿಸಿ ವಿಶೇಷ ಪ್ರವೇಶ ಯೋಜನೆ 125ನೇ ಕೋರ್ಸ್(ಏಪ್ರಿಲ್ 2027) ಅಡಿಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್(ತಾಂತ್ರಿಕೇತರ) ಹುದ್ದೆಗಳಿಗೆ ಅರ್ಹ ಅವಿವಾಹಿತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪುರುಷರಿಗೆ 70 ಹುದ್ದೆಗಳು ಹಾಗೂ ಮಹಿಳೆಯರಿಗೆ 06 ಹುದ್ದೆಗಳು ಮೀಸಲಿವೆ. ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ, 19 ರಿಂದ 25 ವಯೋಮಾನದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.joinindianarmy.nic.in/Authentication.aspxಗೆ ಭೇಟಿ ನಿಗದಿತ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಮುಖ್ಯ ದಿನಾಂಕಗಳು:
- ಪುರುಷ ಅಭ್ಯರ್ಥಿಗಳಿಗೆ: ಆನ್‌ಲೈನ್ ಅರ್ಜಿ ಸಲ್ಲಿಕೆಯು ಜುಲೈ 20, 2026 ರಂದು ಪ್ರಾರಂಭವಾಗಿ, ಆಗಸ್ಟ್ 20, 2026 ರಂದು ಮಧ್ಯಾಹ್ನ 3 ಗಂಟೆಗೆ ಕೊನೆಗೊಳ್ಳಲಿದೆ.
- ಮಹಿಳಾ ಅಭ್ಯರ್ಥಿಗಳಿಗೆ: ಆನ್‌ಲೈನ್ ಅರ್ಜಿ ಸಲ್ಲಿಕೆಯು ಜುಲೈ 21, 2026 ರಂದು ಪ್ರಾರಂಭವಾಗಿ, ಆಗಸ್ಟ್ 21, 2026 ರಂದು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳ್ಳುತ್ತದೆ.
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Graduation) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಪದವಿಯನ್ನು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು(ಆದರೆ ಅವರು 01 ಏಪ್ರಿಲ್ 2027 ರೊಳಗೆ ಪದವಿ ಪೂರ್ಣಗೊಳಿಸಿರಬೇಕು).
ಜೊತೆಗೆ ಎನ್‌ಸಿಸಿಯ ‘ಸಿ’ ಪ್ರಮಾಣಪತ್ರ(NCC ‘C’ Certificate) ಪರೀಕ್ಷೆಯಲ್ಲಿ ಕನಿಷ್ಠ ‘ಬಿ’ ಗ್ರೇಡ್ ಪಡೆದಿರಬೇಕು ಮತ್ತು ಎನ್‌ಸಿಸಿಯ ಸೀನಿಯರ್ ಡಿವಿಷನ್/ವಿಂಗ್‌ನಲ್ಲಿ ಕನಿಷ್ಠ 2 ರಿಂದ 3 ವರ್ಷ ಸೇವೆ ಸಲ್ಲಿಸಿರಬೇಕು.
(ಗಮನಿಸಿ: ಯುದ್ಧದಲ್ಲಿ ಹುತಾತ್ಮರ ಮಕ್ಕಳಿಗೆ ಎನ್‌ಸಿಸಿ ‘ಸಿ’ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ).
ವಯೋಮಿತಿ:
01-01-2027ಕ್ಕೆ ಅನ್ವಯಿಸುವಂತೆ; 19 ರಿಂದ 25 ವರ್ಷಗಳ ಒಳಗಿರಬೇಕು (ಅಭ್ಯರ್ಥಿಗಳು 02 ಜನವರಿ 2002 ಕ್ಕಿಂತ ಮುಂಚಿತವಾಗಿ ಮತ್ತು 01 ಜನವರಿ 2008 ಕ್ಕಿಂತ ತಡವಾಗಿ ಜನಿಸಿರಬಾರದು – ಎರಡೂ ದಿನಾಂಕಗಳು ಸೇರಿಂದತೆ).
ಆಯ್ಕೆ ಪ್ರಕ್ರಿಯೆ:
- ಎನ್‌ಸಿಸಿ ‘ಸಿ’ ಪ್ರಮಾಣಪತ್ರದ ಗ್ರೇಡ್ ಮತ್ತು ಪದವಿಯ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್
- ಎಸ್‌ಎಸ್‌ಬಿ (SSB) ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಪ್ರಿ-ಕಮಿಷನ್ ತರಬೇತಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ(OTA)ಯಲ್ಲಿ ಏಪ್ರಿಲ್ 2027 ರಿಂದ 49 ವಾರಗಳ ಕಾಲ ಪ್ರಿ-ಕಮಿಷನ್ ತರಬೇತಿ ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಮುಗಿಸಿದವರಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ‘ಡಿಫೆನ್ಸ್ ಮ್ಯಾನೇಜ್‌ಮೆಂಟ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್’ನಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ನೀಡಲಾಗುತ್ತದೆ.
ಸ್ಟೈಫಂಡ್:
ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳು ₹56,100 ಸ್ಟೈಫಂಡ್ ನೀಡಲಾಗುತ್ತದೆ.
ವೇತನ:
ತರಬೇತಿಯ ನಂತರ ‘ಲೆಫ್ಟಿನೆಂಟ್’ (Lieutenant) ಶ್ರೇಣಿಯಲ್ಲಿ ಕಮಿಷನ್ ನೀಡಲಾಗುತ್ತದೆ. ಆರಂಭಿಕ ವೇತನ ಶ್ರೇಣಿ ₹56,100 ರಿಂದ ₹1,77,500(ಲೆವೆಲ್ 10) ಇರಲಿದ್ದು, ವಾರ್ಷಿಕ ಸಿಟಿಸಿ (CTC) ಅಂದಾಜು ₹17-18 ಲಕ್ಷ ಇರಲಿದೆ (ಉಚಿತ ವೈದ್ಯಕೀಯ ಸೌಲಭ್ಯ ಸೇರಿ ಇತರೆ ಸೌಲಭ್ಯಗಳು)
ಅರ್ಜಿ ಸಲ್ಲಿಸುವುದು ಹೇಗೆ.?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಆದ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
Important Direct Links:
| Official Notification PDF – Men | Download |
| Official Notification PDF – Women | Download |
| Online Application Form Link | Apply Now |
| Official Website | joinindianarmy.nic.in |
| More Updates | KarnatakaHelp.in |