Grama One Registration Online 2024: ನಮಸ್ಕಾರ ಬಂಧುಗಳೇ, ಗ್ರಾಮ ಒನ್, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುವ ಗುರಿಯನ್ನು ಹೊಂದಿದೆ. ಇದ್ದಕ್ಕೆ ಸಂಬಂಧಪಟ್ಟ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
ಗ್ರಾಮ ಒನ್ ಕೇಂದ್ರ ಫ್ರ್ಯಾಂಚೈಸಿ ಪಡೆಯಲು ಅರ್ಹತೆಗಳೇನು, ಬೇಕಾದ ದಾಖಲಾತಿಗಳೇನು, ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಬಗ್ಗೆ ಈ ಕೆಳಗೆ ವಿವರವಾಗಿ ವಿವರಿಸಲಾಗಿದೆ. ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
Grama one franchise Online Registration 2024
ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ,ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ ಹಾಗೂ ಗ್ರಾಮ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
Eligibility Criteria Of Karnataka Grama One Registration
ಗ್ರಾಮಒನ್ ಫ್ರ್ಯಾಂಚೈಸಿ ಪಡೆಯಲು ಈ ಕೆಳಗಿನ ಎಲ್ಲಾ ಮಾನದಂಡಗಳನ್ನ ಅರ್ಜಿದಾರರು ಹೊಂದಿರಬೇಕು;
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದ ವಾಸಸ್ಥಳಾಗಿರಬೇಕು.
- ಅರ್ಜಿದಾರರು ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
- ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಾಥ್ರ್ಯವಿರಬೇಕು.
- ಅರ್ಜಿದಾರರು ಡಿಪ್ಲೊಮಾ/ಐಟಿಐ/ಪಿಯುಸಿ II/ಪದವೀಧರರಾಗಿರಬೇಕು ಅಥವಾ ತಾಂತ್ರಿಕ ಸಾಮರ್ಥ್ಯದೊಂದಿಗೆ ತತ್ಸಮಾನವಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ, ಹೆಚ್ಚಿನ ಆದ್ಯತೆಗೆ ಮೊದಲ ಆದ್ಯತೆ.
- ವ್ಯಕ್ತಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
- ಅರ್ಜಿದಾರರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಟೈಪಿಂಗ್ ಮಾಡಲು ಪರಿಣತಿ ಹೊಂದಿರಬೇಕು.
- ಒಬ್ಬ ವ್ಯಕ್ತಿಯು ಒಂದು ಕೇಂದ್ರಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಯಾವುದೇ ಕ್ರಿಮಿನಲ್/ಸಮಾಜ-ವಿರೋಧಿ ಪೂರ್ವಾಪರಗಳಿಂದ ಮುಕ್ತರಾಗಿರಬೇಕು ಮತ್ತು ಅರ್ಜಿದಾರರು ಅದಕ್ಕೆ ಬೆಂಬಲವಾಗಿ ಪೊಲೀಸ್ ಪರಿಶೀಲನೆ ಪ್ರಮಾಣಪತ್ರವನ್ನು (PVC) ಅಪ್ಲೋಡ್ ಮಾಡಬೇಕು.
- ಅರ್ಜಿದಾರರು ಗ್ರಾಮಒನ್ ಕೇಂದ್ರವನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳ, ಐಟಿ ಮತ್ತು ಐಟಿಯೇತರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡಲು ಸಿದ್ಧರಿರಬೇಕು ಮತ್ತು ಆಪರೇಟಿಂಗ್ ಸೆಂಟರ್ಗೆ ಅಗತ್ಯವಿರುವ ಕಾರ್ಯಾಚರಣೆಯ ವೆಚ್ಚವನ್ನು ಭರಿಸಲು ಸಿದ್ಧರಿರಬೇಕು.
Required Documents For Grama One Registration
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಕ್ಯಾನ್ಸಲ್ ಚೆಕ್/ಬ್ಯಾಂಕ್ ಪಾಸ್ಬುಕ್
- ಕೇಂದ್ರದ ಚಿತ್ರ (ಒಳಗೆ/ಹೊರಗೆ)
- ಉನ್ನತ ಶಿಕ್ಷಣದ ಪ್ರಮಾಣಪತ್ರ
Last Date of Grama one franchise Online Registration 2024
———————————————————————–
How to Apply Karnataka Grama One Registration
ಮೊದಲು ಅಧಿಕೃತ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನ ಅನುಸರಿಸಿ;
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡಿ
- ನಂತರ ಜಾಲತಾಣದಲ್ಲಿ “Submit Application” ಮೇಲೆ ಕ್ಲಿಕ್ ಮಾಡಿ.
- ಮುಂದೆ “Registration Form” ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿ
- ನಂತರ ಅಲ್ಲಿ ಕೇಳಲಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ಮುಂದೆ ಅರ್ಜಿ ಶುಲ್ಕ ಕೇಳಿದರೆ ಅರ್ಜಿ ಶುಲ್ಕ ಪಾವತಿಸಿ.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Links:
Karnataka Grama One Online Registration Link | Apply Now |
Official Website | Grama One |
More Updates | Karnataka Help.in |
FAQs – Grama One Registration Online
How to Apply for Grama one franchise 2024?
Visit the Official Website to Apply for Karnataka Grama One