UPSC NDA NA 2 Final Result 2023 (OUT): ಅಂತಿಮ ಫಲಿತಾಂಶ ಬಿಡುಗಡೆ, ಇಲ್ಲಿದೆ ಡೈರೆಕ್ಟ್ ಲಿಂಕ್

Follow Us:

UPSC NDA NA 2 Final Result 2023 : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) UPSC NDA NA 2 ಗೆ ಪರೀಕ್ಷೆಗೆ ಸಂಬಂಧಿಸಿದ ಫಲಿತಾಂಶವನ್ನು ಪ್ರಕಟಿಸಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯ (UPSC NDA, NA 2 2023) ಫಲಿತಾಂಶವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ upsc.gov.in. ವೆಬ್ ಸೈಟ್ ನಲ್ಲಿ PDF ಡೌನ್ಲೋಡ್ ಮಾಡಿ ವೀಕ್ಷಿಸಬಹುದು. ಹೆಸರು ಹಾಗೂ ನೊಂದಣಿ ಸಂಖ್ಯೆಗಳನ್ನು PDF ನಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬಹುದಾಗಿದೆ.

ಸೆಪ್ಟೆಂಬರ್ 3 2023 ರಂದು ನಡೆದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಮೇಲೆ ಒಟ್ಟು 699 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಯುಪಿಎಸ್‌ಸಿ ಟಾಪರ್‌ಗಳ ಹೆಸರನ್ನು ಹಂಚಿಕೊಂಡಿದ್ದು ,2024 ರ ಎನ್‌ಡಿಎ ಮತ್ತು ಎನ್‌ಎ 2 ಪರೀಕ್ಷೆಯಲ್ಲಿ ಅನ್ಮೋಲ್ ಅಗ್ರಸ್ಥಾನ ಪಡೆದುಕೊಂಡರೆ, ವಿನಿತ್ ಮತ್ತು ಮೌಪ್ರಿಯಾ ಪೈಡಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ. ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಯ 152ನೇ ಬ್ಯಾಚ್‌ ಕೋರ್ಸ್‌ಗೆ ಹಾಗೂ ನೇವಲ್‌ ಅಕಾಡೆಮಿಯ 114ನೇ ಬ್ಯಾಚ್‌ ಕೋರ್ಸ್‌ಗೆ ಯುಪಿಎಸ್‌ಸಿ ಈ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.

How to Check UPSC NDA NA 2 Final Result 2023

UPSC NDA, NA 2 2023ರ ಫಲಿತಾಂಶ ವೀಕ್ಷಣೆಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ

  • UPSC ಯ upsc.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ‘UPSC NDA ಅಂತಿಮ ಫಲಿತಾಂಶ 2024’ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ
  • ಆಯ್ಕೆಯಾದ ಅಭ್ಯರ್ಥಿಗಳ ರೋಲ್ ಸಂಖ್ಯೆಗಳು ಮತ್ತು ಹೆಸರುಗಳನ್ನು ಒಳಗೊಂಡಿರುವ ಹೊಸ PDF ತೆರೆಯುತ್ತದೆ.
  • UPSC NDA ಅಂತಿಮ ಫಲಿತಾಂಶ 2024 ಪರದೆಯ ಮೇಲೆ ಕಾಣಿಸುತ್ತದೆ.
  • UPSC NDA, NA 2 ಫಲಿತಾಂಶಗಳ ಮುದ್ರಣವನ್ನು ತೆಗೆದುಕೊಳ್ಳಿ.

ಹೆಚ್ಚುವರಿ ಮಾಹಿತಿ ಅಗತ್ಯವಿದ್ದರೆ, ಅವರು ಗೇಟ್‌ನ ಪಕ್ಕದಲ್ಲಿರುವ UPSC ಫೆಸಿಲಿಟೇಶನ್ ಡೆಸ್ಕ್ ಅನ್ನು ಸಂಪರ್ಕಿಸಬಹುದು. ಸಿ ಅಥವಾ ವಾರದ ದಿನಗಳಲ್ಲಿ ಕಛೇರಿ ಸಮಯದಲ್ಲಿ 011-23385271/011-23381125/011 ಕರೆ ಮಾಡಬಹುದಾಗಿದೆ.

Important Links:

UPSC NDA, NA 2 Final Result 2023 List PDFDownload
Official Websiteupsc.gov.in
More UpdatesKarnatakaHelp.in

Leave a Comment