JEE Advanced 2024 Admit Card: ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (IIT-M) JEE ಅಡ್ವಾನ್ಸ್ಡ್ 2024 ಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶ ಕಾರ್ಡ್ಗಳನ್ನು ಇಂದು(ಮೇ 17) ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಿಂದ ತಮ್ಮ ಪ್ರವೇಶ ಕಾರ್ಡ್ಗಳನ್ನು ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು Admit Card ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
JEE ಅಡ್ವಾನ್ಸ್ ಪರೀಕ್ಷೆಯು ಮೇ 26 ರಂದು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಪ್ರವೇಶ ಕಾರ್ಡ್ ಕಡ್ಡಾಯವಾಗಿದೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ, JEE ಅಡ್ವಾನ್ಸ್ಡ್ ಪರೀಕ್ಷೆಯು ಮೇ 26 ರಂದು ಎರಡು ಪಾಳಿಗಳಲ್ಲಿ ನಡೆಯಲಿದೆ. ಪೇಪರ್ 1 ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಿಗದಿಪಡಿಸಲಾಗಿದ್ದು, ಪೇಪರ್ 2 ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ. ತಾತ್ಕಾಲಿಕ ಕೀ ಉತ್ತರವನ್ನು ಜೂನ್ 2, 2024 ರಂದು ಬಿಡುಗಡೆ ಮಾಡಲಾಗುವುದು, ಅಂತಿಮ ಕೀ ಉತ್ತರ ಮತ್ತು ಫಲಿತಾಂಶಗಳನ್ನು ಜೂನ್ 9, 2024 ರಂದು ಪ್ರಕಟಿಸುವ ನಿರೀಕ್ಷೆಯಿದೆ.
How to Download JEE Advanced 2024 Admit Card
JEE Advance ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವ ವಿಧಾನ:
- ಅಧಿಕೃತ ವೆಬ್ಸೈಟ್ https://jeeadv.ac.in/ ಗೆ ಭೇಟಿ ನೀಡಿ.
- “JEE ಅಡ್ವಾನ್ಸ್ಡ್ 2024 ಪ್ರವೇಶ ಪತ್ರ ಡೌನ್ಲೋಡ್” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ JEE ಮುಖ್ಯ 2024 ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
- “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
- ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ.
Important Links:
JEE Advanced 2024 Admit Card Download Link | Click Here |
JEE Advanced 2024 Notification | Details |
Official Website | jeeadv.ac.in |
More Updates | KarnatakaHelp.in |