SSC CPO Answer Key 2024: ಸಿಬ್ಬಂದಿ ಅಯ್ಕೆ ಅಯೋಗವು ನಡೆಸಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ದೆಹಲಿ ಪೊಲೀಸರಲ್ಲಿ ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ SSC CPO ಪರೀಕ್ಷೆಯ ಟೈರ್-1 ಅಂತಿಮ ಕೀ ಉತ್ತರಗಳನ್ನು ಅಕ್ಟೋಬರ್ 23, 2024ರಂದು ಪ್ರಕಟಿಸಿದೆ.
ಈ ಪರೀಕ್ಷೆಗಳನ್ನು ಸಿಬ್ಬಂದಿ ಆಯ್ಕೆ ಆಯೋಗವು ಜೂನ್ 27, 28 ಮತ್ತು 29 ರಂದು ನಡೆಸಲಾಗಿತ್ತು, ಪರೀಕ್ಷೆಗೆ ಸಾಕಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಈಗಾಗಲೇ ಇಲಾಖೆಯು ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 05, 2024 ರಂದು ಪ್ರಕಟಿಸಿತ್ತು. ಪ್ರಕಟಿಸಿದ ಕೀ ಉತ್ತರಗಳಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗನ್ನು ತಜ್ಞರು ಪರಿಶೀಲಿಸಿದ ನಂತರ ಇಲಾಖೆಯು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ.
ಈ ಅಂತಿಮ ಕೀ ಉತ್ತರಗಳನ್ನು ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಲು/ಪ್ರಿಂಟ್ ತೆಗೆದುಕೊಳ್ಳಲು ದಿನಾಂಕ ಅಕ್ಟೋಬರ್ 23, 2024(06:00 PM) ರಿಂದ ನವೆಂಬರ್ 07, 2024(06:00 PM) ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿ ಮುಗಿತ ನಂತರ ಪರಿಶೀಲಿಸಿಕೊಳ್ಳಲು/ಪ್ರಿಂಟ್ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.
How to Download SSC CPO Final Answer Key 2024 (Tier-1)
ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ:
- SSC ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ.
- ‘Key Answer’ ಟ್ಯಾಬ್ ಕ್ಲಿಕ್ ಮಾಡಿ.
- “SSC CPO 2024 ಟೈರ್-1 ಅಂತಿಮ ಕೀ ಉತ್ತರ” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ SSC ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
- “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
- ಕೀ ಉತ್ತರಗಳ PDF ಸ್ವರೂಪದಲ್ಲಿ ತೆರೆದುಕೊಳ್ಳುತ್ತದೆ.
Important Direct Links:
SSC CPO Final Answer Key 2024 (Tier-1) Notice PDF | Download |
SSC CPO Final Answer Key 2024 (Tier-1) Download Link | Click here |
Official Notification PDF | Download |
Official Website | ssc.gov.in |
More Updates | Karnataka Help.in |