ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI)ದಲ್ಲಿ ಪ್ರಸಕ್ತ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ತನ್ನ ವಿವಿಧ ಘಟಕಗಳು ಹಾಗೂ ಕಾರ್ಯಗಾರಗಳಲ್ಲಿ ಖಾಲಿ ಇರುವ ಒಟ್ಟು 20 ಅಪ್ರೆಂಟಿಸ್ ಹುದ್ದೆಗಳ(ಪದವೀಧರ ಹಾಗೂ ಡಿಪ್ಲೊಮಾ) ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NATS ಅಧಿಕೃತ ವೆಬ್ ಸೈಟ್ https://nats.education.gov.in/ಗೆ ಭೇಟಿ ನೀಡಿ, ನ.24ರೊಳಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಇ/ಬಿ.ಟೆಕ್/ಬಿ.ಎ/ಬಿ.ಕಾಂ/ಬಿಎ/ಬಿ.ಎಸ್.ಸಿ/ಬಿ.ಬಿ.ಎ/ಬಿ.ಸಿ.ಎ ಅಥವಾ ಸಂಬಂಧಿಸಿದ ಕ್ಷೇತ್ರದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
• ಪದವೀಧರ ಅಪ್ರೆಂಟಿಸ್ – ಬಿ.ಇ/ಬಿ.ಟೆಕ್/ಬಿ.ಎ/ಬಿ.ಕಾಂ/ಬಿಎ/ಬಿ.ಎಸ್.ಸಿ/ಬಿ.ಬಿ.ಎ/ಬಿ.ಸಿ.ಎ • ಡಿಪ್ಲೊಮಾ ಅಪ್ರೆಂಟಿಸ್ – ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ
• 2021ರಲ್ಲಿ ಅಥವಾ 2021ರ ನಂತರ ಪದವಿ/ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ:
24-11-2025 ರಂತೆ;
ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಹತೆ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 12,000-15,000ರೂ. ವರೆಗೆ ಮಾಹೆಯಾನ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
• NATS ಅಧಿಕೃತ ವೆಬ್ ಸೈಟ್ https://nats.education.gov.in/ ಗೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ “ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ – RCDU/FIU & E&M/ಕಾರ್ಯಾಗಾರ, ಸಫ್ದರ್ಜಂಗ್ ವಿಮಾನ ನಿಲ್ದಾಣ, ನವದೆಹಲಿ. NATS ಪೋರ್ಟಲ್ ಐಡಿ: NDLNDC000087]” ಹುಡುಕಿ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
• ತರಬೇತಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲಾಗಿದೆ. ಲಭ್ಯತೆಯ ಆಧಾರದ ಮೇಲೆ, ನಿಮ್ಮನ್ನು ಸಂಸ್ಥೆಯು ಸಂಪರ್ಕಿಸುತ್ತದೆ” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
• ಸಾಮಾನ್ಯ ಸ್ಟ್ರೀಮ್ ಅಭ್ಯರ್ಥಿಗಳು ಅರ್ಜಿಯನ್ನು ipaggarwal@aai.aero ಗೆ ಸಲ್ಲಿಸಬಹುದು. (ಲಗತ್ತು ಒಂದೇ PDF ಫೈಲ್ನಲ್ಲಿ ಮಾತ್ರ ಇರಬೇಕು)
• ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ನವೆಂಬರ್ 24 ರೊಳಗೆ ಸಲ್ಲಿಸಬಹುದು.
I need opportunity for jobs