ಏರ್ಪೋರ್ಟ್ ಅಥೋರಿಟಿ ಆಫ್ ಇಂಡಿಯಾ (ಎಎಐ ಎಟಿಸಿ) ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗದಲ್ಲಿ ಖಾಲಿ ಇರುವ 309 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ(AAI ATC Recruitment 2025) ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಏರ್ಪೋರ್ಟ್ ಅಥೋರಿಟಿ ಆಫ್ ಇಂಡಿಯಾ (ಎಎಐ ಎಟಿಸಿ) ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗದಲ್ಲಿ ಖಾಲಿ ಇರುವ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಎಎಐ (ಏರ್ಪೋರ್ಟ್ ಅಥೋರಿಟಿ ಆಫ್ ಇಂಡಿಯಾ) ನ ಅಧಿಕೃತ ವೆಬ್ ಸೈಟ್ https://www.aai.aeroಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name –Airport Authority of India (AAI)
Post Name – Junior Executive
Total Vacancy – 309
Application Process – Online
Job Location – all India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 25 ರಿಂದ ಪ್ರಾರಂಭವಾಗಿ, ಮೇ 24, 2025ರಂದು ಕೊನೆಗೊಳ್ಳಲಿದೆ.
ಖಾಲಿ ಇರುವ ಹುದ್ದೆಗಳ ವಿವರ:
• ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲರ್) – ಒಟ್ಟು 309 ಹುದ್ದೆಗಳು.
ವರ್ಗವಾರು ಹುದ್ದೆಗಳ ವಿವರ;
•ಯು ಆರ್ – 125
•ಇ ಡಬ್ಲ್ಯೂ ಎಸ್ – 30
• ಓಬಿಸಿ (ಎನ್ ಸಿ ಎಲ್) – 72
• ಎಸ್ ಸಿ – 55
• ಎಸ್ ಟಿ – 27
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಭೌತಶಾಸ್ತ್ರ ಮತ್ತು ಗಣಿತದೊಂದಿಗೆ ಮೂರು ವರ್ಷಗಳ ಪೂರ್ಣಾವಧಿ ವಿಜ್ಞಾನ (B.Sc) ಪದವಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ ಪೂರ್ಣಾವಧಿ ನಿಯಮಿತ ಪದವಿ(Degree in Engineering)ಯನ್ನು ಪೂರ್ಣಗೊಳಿಸಿರಬೇಕು. (ಭೌತಶಾಸ್ತ್ರ ಮತ್ತು ಗಣಿತವು ಸೆಮಿಸ್ಟರ್‌ನ ಯಾವುದೇ ಪಠ್ಯಕ್ರಮದ ವಿಷಯಗಳಾಗಿರಬೇಕು)
ವಯೋಮಿತಿ:
- 24.05.2025 ರಂತೆ ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು
(ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ)
ಆಯ್ಕೆ ಪ್ರಕ್ರಿಯೆ:
- ಅರ್ಜಿ ಪರಿಶೀಲನೆ
- ಧ್ವನಿ ಪರೀಕ್ಷೆ
- ಸೈಕೋಆಕ್ಟಿವ್ ಸಬ್‌ಸ್ಟೆನ್ಸಸ್ ಪರೀಕ್ಷೆ
- ಸೈಕಲಾಜಿಕಲ್ ಅಸೆಸ್‌ಮೆಂಟ್ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ಹಿನ್ನೆಲೆ ಪರಿಶೀಲನೆ
- ಆನ್ ಲೈನ್ ಪರೀಕ್ಷೆ
ಅರ್ಜಿ ಶುಲ್ಕ:
- ಎ ಎ ಐ ನಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಯನ್ನು ಪಡೆದ SC/ ST/ ಮಹಿಳೆಯರು PWD ಮತ್ತು ಅಪ್ರೆಂಟಿಸ್ ಗಳಿಗೆ ಯಾವುದೇ ಶುಲ್ಕವಿರುವುದಿಲ್ಲ
- ಇತರ ವರ್ಗದ ಅಭ್ಯರ್ಥಿಗಳಿಗೆ – 1000 ರೂ.
How to Apply for AAI ATC Recruitment 2025
ಅರ್ಜಿ ಸಲ್ಲಿಸುವ ವಿಧಾನ ಹೇಗೆ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧಿಕೃತ ವೆಬ್‌ಸೈಟ್ https://aai.aero/ ಗೆ ಭೇಟಿ ನೀಡಿ.
- ಮುಖಪುಟದಲ್ಲಿ “ಕೆರಿಯರ್” ಮೇಲೆ ಕ್ಲಿಕ್ ಮಾಡಿ.
- ಉತ್ತರ ಪ್ರದೇಶ-AAI ನಲ್ಲಿ ಕಾರ್ಯನಿರ್ವಾಹಕೇತರ ಕೇಡರ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು “ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ವಿಭಾಗಗಳಲ್ಲಿ ಜೂನಿಯರ್ ಕಾರ್ಯನಿರ್ವಾಹಕರ ನೇರ ನೇಮಕಾತಿ ಸೂಚನೆಯ ಮೇಲೆ ಕ್ಲಿಕ್ ಮಾಡಿ.
- ಮುಖಪುಟದಲ್ಲಿ ಕಾಣುವ “ನೋಂದಣಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸಹಾಯದ ಮೂಲಕ ಖಾತೆಯನ್ನು ರಚಿಸಿ ನೋಂದಣಿ ಮಾಡಿಕೊಳ್ಳಿ.
- ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
- ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಮತ್ತು ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ
- ಕೊನೆಯದಾಗಿ ಅರ್ಜಿಯನ್ನು ಪರಿಶೀಲನೆ ಮಾಡಿ, ಅರ್ಜಿಯನ್ನು ಸಲ್ಲಿಸಿ
Important Direct Links:
Official Notification PDF | Download |
Online Application Form Link | Apply Now |
Official Website | www.aai.aero |
More Upadtes | KarnatakaHelp.in |