ಪ್ರಸಕ್ತ ಸಾಲಿಗೆ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಸಂಬಂಧಿಸಿದಂತೆ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯು ಕೌನ್ಸೆಲಿಂಗ್ ಮೂಲಕ ನಡೆಯಲಿದ್ದು, ಸದರಿ ಸುತ್ತಿಗೆ 1:30ರ ಅನುಪಾತದಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಮೆರಿಟ್ ಪಟ್ಟಿ ಹಾಗೂ ಕೌನ್ಸೆಲಿಂಗ್ಗಾಗಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಕೌನ್ಸೆಲಿಂಗ್ ಪ್ರಕ್ರಿಯೆಯು ಸಾಮಾನ್ಯ ಮೆರಿಟ್ ವಿದ್ಯಾರ್ಥಿಗಳಿಗೆ ಆಗಸ್ಟ್ 11 ರಿಂದ 12 ವರೆಗೆ ಮತ್ತು ಮೀಸಲಾತಿ ವರ್ಗವಾರು ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ಆಗಸ್ಟ್ 13 ರಿಂದ 14ರವೆರೆಗೆ ನಡೆಯಲಿದೆ ಎಂದು ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಬಿತ್ತರಿಸಿದೆ.
ಬಂಧುಗಳೇ 4ನೇ ಸುತ್ತಿನಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಕೌನ್ಸೆಲಿಂಗ್ಗಾಗಿ 4ನೇ ಸುತ್ತಿನ ಪಟ್ಟಿಯ ಪಿಡಿಎಫ್ ಅನ್ನು ಈ ಸುದ್ದಿಯ ಕೊನೆಯಲ್ಲಿ “Important Direct Links” ನ ಶೀರ್ಷಿಕೆಯಡಿ ನೀಡಲಾಗಿದೆ.
How to Download Adarsha Vidyalaya 4th Round List 2025
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪಟ್ಟಿಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ;
1.ಮೊದಲು ಆದರ್ಶ ವಿದ್ಯಾಲಯದ ಅಂತರ್ಜಾಲ http://164.100.133.7:82/home.aspxಕ್ಕೆ ಭೇಟಿ ನೀಡಿ
2.ನಂತರ 2025-26- 6 ನೇ ತರಗತಿಗೆ ಪ್ರವೇಶ ಮೇಲೆ ಕ್ಲಿಕ್ ಮಾಡಿ.
Adarsha Vidyalaya Round 4 Students List Download Guide
3. ಮುಂದೆ “ರೌಂಡ್ 4 – ಲಭ್ಯವಿರುವ ಸೀಟುಗಳು” ಮತ್ತು “ಕೌನ್ಸೆಲಿಂಗ್ಗಾಗಿ 4 ನೇ ಸುತ್ತಿನ ಪಟ್ಟಿ” ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Important Direct Links:
Adarsha Vidyalya Round 4 List for Counselling 2025 PDF
Vkvkvkvkvk
v good