ಭಾರತೀಯ ವಕೀಲ ಪರಿಷತ್ತು (Bar Council of India-BCI) 20ನೇ ಅಖಿಲ ಭಾರತ ವಕೀಲರ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನ.30ರಂದು ಆಫ್ಲೈನ್ನಲ್ಲಿ ಪರೀಕ್ಷೆ ನಡೆಯಲಿದ್ದು, ಭಾರತೀಯ ನ್ಯಾಯಾಲಯಗಳಲ್ಲಿ ವಕೀಲರಾಗಿ ವೃತ್ತಿಜೀವನ ನಡೆಸಲು ಕಾನೂನು ಪದವೀಧರರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಅತ್ಯಗತ್ಯ. ಅರ್ಜಿ ಸಲ್ಲಿಸಲು ಸಾಮಾನ್ಯ/ಒಬಿಸಿ ವರ್ಗ ಶೇ.45 ಮತ್ತು ಪರಿಶಿಷ್ಟ ಜಾತಿ/ಪಂಗಡ ಮತ್ತು ಅಂಗವಿಕಲ ವರ್ಗದವರಿಗೆ ಶೇ.40ರಷ್ಟು ಉತ್ತೀರ್ಣತೆ ಪ್ರಮಾಣ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.29 ರಿಂದ ಅ.28ರವರೆಗೆ ಅವಕಾಶವಿದೆ. ಆಸಕ್ತರು https://www.allindiabarexamination.com/ನ ಮೂಲಕ ನೋಂದಣಿ ಮಾಡಬಹುದು.
ಪ್ರವೇಶ ಪತ್ರಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡುವ ಅವಧಿ – ನವೆಂಬರ್ 15
ಪರೀಕ್ಷಾ ದಿನಾಂಕ – ನವೆಂಬರ್ 30
ಅರ್ಜಿ ಸಲ್ಲಿಸಲು ಯಾರು ಅರ್ಹರು:
ಭಾರತೀಯ ವಕೀಲ ಪರಿಷತ್ತಿನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಈ ಕೆಳಗಿನ ಅರ್ಹತೆ ಪೂರೈಸಿರಬೇಕು;
→ ಕಾನೂನು ಪದವಿ ಪಡೆದಿರುವವರು. → ಹಿಂದಿನ ಸೆಮಿಸ್ಟರ್ಗಳಲ್ಲಿ ಬ್ಯಾಕ್ಲಾಗ್ಗಳಿಲ್ಲದ ಅಂತಿಮ ಸೆಮಿಸ್ಟರ್ನಲ್ಲಿ ಓದುತ್ತಿರುವ ಅಭ್ಯರ್ಥಿಗಳು → 3 ವರ್ಷ ಅಥವಾ 5 ವರ್ಷ ಎಲ್ಎಲ್ಬಿ ಉತ್ತೀರ್ಣರಾಗಿ ಪದವಿ ಪಡೆಯದ ಅಭ್ಯರ್ಥಿಗಳು → ಕಾನೂನು ಪದವಿ ಪಡೆದಿದ್ದರೂ ಯಾವುದೇ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ದಾಖಲಾಗದ ಅಥವಾ ದಾಖಲಾತಿ ಪ್ರಮಾಣಪತ್ರವನ್ನು ಒಪ್ಪಿಸಿರುವ ಅಭ್ಯರ್ಥಿಗಳು
ಈ ಮೇಲಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪರಿಷತ್ತು ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಅರ್ಜಿ ಸಲ್ಲಿಕೆ ಹೀಗೆ…
ಅಧಿಕೃತ ಜಾಲತಾಣ https://www.allindiabarexamination.com/ಕ್ಕೆ ಭೇಟಿ ನೀಡಿ
Aibe Xx Application Form 2025
ಮುಖಪುಟದಲ್ಲಿ ನೀಡಲಾದ “ನೋಂದಣಿ(Registration)” ಗುಂಡಿ ಮೇಲೆ ಒತ್ತಿ, ಕೇಳಾದ ವಿವರ ಭರ್ತಿ ಮಾಡಿ ನೋಂದಣಿಯಾಗಿ ಮುಂದೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು;
➣ ವೈಯಕ್ತಿಕ ವಿವರಗಳು ➣ ವಿಳಾಸದ ವಿವರಗಳು ➣ ಶೈಕ್ಷಣಿಕ ವಿವರಗಳು ➣ ಪರೀಕ್ಷೆ (ಭಾಷೆ ಮತ್ತು ಪರೀಕ್ಷಾ ಕೇಂದ್ರದ ಆಯ್ಕೆ) ➣ ಲಗತ್ತು (ಕೇಳಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ) ➣ ಪೂರ್ವವೀಕ್ಷಣೆ ಮತ್ತು ಘೋಷಣೆ ➣ಅರ್ಜಿ ಶುಲ್ಕ ಪಾವತಿ