ನಮ್ಮ ದೇಶದ ವಿಶೇಷ ಬೆಳೆ ವಿಮಾ ಪೂರೈಕೆ ಕಂಪೆನಿಯಾದ ಭಾರತೀಯ ಕೃಷಿ ವಿಮಾ ಕಂಪನಿ ಲಿಮಿಟೆಡ್ (AIC)ಯಲ್ಲಿ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ(AIC MT Recruitment 2025)ಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜ.30 ರಿಂದ ಪ್ರಾರಂಭವಾಗಿ ಫೆ.20ಕ್ಕೆ ಕೊನೆಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು www.aicofindia.comಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆ ಮಾಡಲು ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೂ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Organization Name – Agriculture Insurance Company of India Limited (AIC) Post Name – Management Trainee Total Vacancy – 55 Application Process – Online Job Location – All Over India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ ದಿನಾಂಕ – ಜನವರಿ 30, 2025 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆ ದಿನಾಂಕ – ಫೆಬ್ರವರಿ 20, 2025
ಹುದ್ದೆಗಳ ವಿವರ:
ಐಟಿ(ಮಾಹಿತಿ ತಂತ್ರಜ್ಞಾನ) – 20 ಹುದ್ದೆಗಳು
ಆಕ್ಚುರಿಯಲ್ – 5 ಹುದ್ದೆಗಳು
ಜನರಲಿಸ್ಟ್ – 30 ಹುದ್ದೆಗಳು
ಅರ್ಜಿ ಸಲ್ಲಿಕೆಗೆ ಬೇಕಾದ ಶಿಕ್ಷಣ ಅರ್ಹತೆ:
ಜನರಲಿಸ್ಟ್ ಹುದ್ದೆಗೆ – ಯಾವುದೇ ವಿಭಾಗದಲ್ಲಿ ಪದವಿ(Any Degree)/ ಸ್ನಾತಕೋತ್ತರ ಪದವಿ(Any PG) ಪಡೆದಿರಬೇಕು.
ಆಕ್ಚುರಿಯಲ್ ಹುದ್ದೆಗೆ – ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಅಂಕಿಅಂಶ / ಗಣಿತ / ವಿಮಾ ಗಣಿತ ವಿಜ್ಞಾನ / ಅರ್ಥಶಾಸ್ತ್ರ / ಕಾರ್ಯಾಚರಣೆ ಸಂಶೋಧನೆ ವಿಷಯಗಳಲ್ಲಿ ಪೂರ್ಣಗೊಳಿಸಿರಬೇಕು.
ಐಟಿ(IT) ಹುದ್ದೆಗೆ – ಬಿ. ಇ/ಬಿ.ಟೆಕ್ / ಎಂ.ಇ. / ಎಂ.ಟೆಕ್ ನಲ್ಲಿ ಕಂಪ್ಯೂಟರ್ ವಿಜ್ಞಾನ/ಮಾಹಿತಿ ತಂತ್ರಜ್ಞಾನ/ಎಂಸಿಎ ಹೊಂದಿರಬೇಕು.
ವಯೋಮಿತಿ:
01.12.2024 ರಂತೆ ವಯಸ್ಸಿನ ಮಿತಿಯು ಕನಿಷ್ಠ- 21 ವರ್ಷಗಳು ಮತ್ತು ಗರಿಷ್ಠ- 30 ವರ್ಷಗಳು ಇರಬೇಕು.