ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) 2026-27ನೇ ಶೈಕ್ಷಣಿಕ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ (AISSEE)ಗೆ ಅರ್ಜಿ ಆಹ್ವಾನಿಸಿದೆ.
ದೇಶದಾದ್ಯಂತ ಸೈನಿಕ ಶಾಲೆಗಳಲ್ಲಿ 6 ಮತ್ತು 9ನೇ ತರಗತಿಗಳ ಪ್ರವೇಶತಿಗಾಗಿ ನಡೆಸಲಾಗುವ ಪರೀಕ್ಷೆ ಇದಾಗಿದೆ. ಪ್ರಸ್ತುತ 5ನೇ ಮತ್ತು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ಜಾಲತಾಣ https://exams.nta.nic.in/sainik-school-society/ಕ್ಕೆ ಭೇಟಿ ನೀಡಿ ಅ.30ರೊಳಗೆ ಮೂಲಕ ಅರ್ಜಿ ಸಲ್ಲಿಸಬಹುದು..
ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ – ಅಕ್ಟೋಬರ್ 10, 2025
ಅರ್ಜಿ ಸಲ್ಲಿಸಲು ಕೊನೆಯ ದಿನ – ಅಕ್ಟೋಬರ್ 30, 2025
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಅಕ್ಟೋಬರ್ 31, 2025
ಪರೀಕ್ಷೆ ನಡೆಯುವ ದಿನಾಂಕ – ಜನವರಿ 2026
ಶೈಕ್ಷಣಿಕ ಅರ್ಹತೆ:
✓ 6ನೇ ತರಗತಿ ಪ್ರವೇಶ ಪರೀಕ್ಷೆಗೆ; ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ/ಉತ್ತೀರ್ಣರಾಗಿರಬೇಕು.
✓ 9ನೇ ತರಗತಿ ಪ್ರವೇಶ ಪರೀಕ್ಷೆಗೆ; ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ/ಉತ್ತೀರ್ಣರಾಗಿರಬೇಕು.
ವಯೋಮಿತಿ:
31-03-2026 ರಂತೆ;
✓ 6ನೇ ತರಗತಿ ಪ್ರವೇಶ ಪರೀಕ್ಷೆಗೆ;
ಕನಿಷ್ಠ ವಯಸ್ಸಿನ ಮಿತಿ – 10 ವರ್ಷಗಳು.
ಗರಿಷ್ಠ ವಯಸ್ಸಿನ ಮಿತಿ – 12 ವರ್ಷಗಳು.
ದಿನಾಂಕ (01-04-2014 ರಿಂದ 31-03-2016)ರ ನಡುವೆ (ಎರಡೂ ದಿನಗಳು ಸೇರಿದಂತೆ) ಜನಿಸಿರಬೇಕು.
✓ 9ನೇ ತರಗತಿ ಪ್ರವೇಶ ಪರೀಕ್ಷೆಗೆ;
ಕನಿಷ್ಠ ವಯಸ್ಸಿನ ಮಿತಿ – 13 ವರ್ಷಗಳು.
ಗರಿಷ್ಠ ವಯಸ್ಸಿನ ಮಿತಿ – 15 ವರ್ಷಗಳು.
ದಿನಾಂಕ (01-04-2011 ರಿಂದ 31-03-2013)ರ ನಡುವೆ (ಎರಡೂ ದಿನಗಳು ಸೇರಿದಂತೆ) ಜನಿಸಿರಬೇಕು.
ಆಯ್ಕೆ ವಿಧಾನ:
ಪ್ರವೇಶ ಪರೀಕ್ಷೆ ದಾಖಲೆ ಪರಿಶೀಲನೆ ಅರ್ಹತಾ ಪಟ್ಟಿ
ಪರೀಕ್ಷಾ ಶುಲ್ಕ:
ಸಾಮಾನ್ಯ, ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರು ಹಾಗೂ ಒಬಿಸಿ(ಎನ್ಸಿಎಲ್)ಅಭ್ಯರ್ಥಿಗಳಿಗೆ – 850ರೂ. ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 700ರೂ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
ವಿದ್ಯಾರ್ಥಿಗಳ ಆಧಾರ್ ಕಾರ್ಡ್
ಮಾನ್ಯವಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ
ಚಾಲ್ತಿಯಲ್ಲಿರುವ ಜಾತಿ, ಆದಾಯ ಪ್ರಮಾಣ ಪತ್ರ (ಅನ್ವಯಿಸಿದರೆ)
ಭಾವಚಿತ್ರ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನ್ಮ ದಿನಾಂಕ ಪ್ರಮಾಣಪತ್ರ ಇತ್ಯಾದಿ..
ಪರೀಕ್ಷೆಯ ವಿವರ ಹಾಗೂ ದಿನಾಂಕ:
2026-27 ಶೈಕ್ಷಣಿಕ ಸಾಲಿನ ಭಾರತ ಸೈನಿಕ ಶಾಲೆಗಳ 6ನೇ ಮತ್ತು 9ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು 2026 ಜನವರಿ ಮಾಹೆಯಲ್ಲಿ ನಡೆಸಲಾಗುತ್ತದೆ. ಬಹು ಆಯ್ಕೆಯ ಪ್ರಶ್ನೆಗಳು (MCQ) ಮಾದರಿಯಲ್ಲಿ ಪೆನ್ನು ಮತ್ತು ಕಾಗದ (OMR ಹಾಳೆ ಆಧಾರಿತ) ವಿಧಾನದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆ ನಡೆಯುವ ನಿಗದಿತ ದಿನಾಂಕ, ಸಮಯ ಹಾಗೂ ಪ್ರವೇಶ ಪತ್ರವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು.
6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 13 ಮಾಧ್ಯಮ(ಭಾಷೆ)ಗಳಲ್ಲಿ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸಲಾಗುತ್ತದೆ. ಪರೀಕ್ಷೆ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡ 4 ರಿಂದ 6 ವಾರಗಳ ಒಳಗೆ ಫಲಿತಾಂಶವನ್ನು ವಿದ್ಯಾರ್ಥಿಗಳು ನಿರೀಕ್ಷಿಸಬಹುದು.
Steps to Registration for AISSEE-2026 Examination
ಅರ್ಜಿ ಸಲ್ಲಿಕೆಯ ವಿಧಾನ ಈ ಕೆಳಗಿನಂತಿದೆ;
• ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಮಾಹಿತಿ ಬುಲೆಟಿನ್ ಅನ್ನು ಡೌನ್ಲೋಡ್ ಮಾಡಿ ತಪ್ಪದೇ ಓದಬೇಕು.
• NTA ಅಧಿಕೃತ ಜಾಲತಾಣ https://exams.nta.nic.in/sainik-school-society/ ಕ್ಕೆ ಭೇಟಿ ನೀಡಿ.
• ನಂತರ ಅಭ್ಯರ್ಥಿ ಚಟುವಟಿಕೆ(Candidate Activity) ವಿಭಾಗದ ಕೆಳಗೆ ನೀಡಲಾಗಿರುವ – “AISSEE-2026 ಪರೀಕ್ಷೆಗೆ ನೋಂದಣಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
Aissee 2026 Application Form
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಇತ್ತೀಚಿನ ಭಾವಚಿತ್ರ ಮತ್ತು ಸಹಿ (ಫೈಲ್ ಗಾತ್ರ:10 ಕೆಬಿ – 50 ಕೆಬಿ) ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಂತರ ಸಲ್ಲಿಸಿ.
• ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ವ್ಯವಸ್ಥೆಯಿಂದ ರಚಿಸಲಾದ ಅರ್ಜಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.
• ಭವಿಷ್ಯದ ಉಲ್ಲೇಖಕ್ಕಾಗಿ ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.