ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

Published on:

ಮೈಸೂರು: ಆಹಾರ ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ವತಿಯಿಂದ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಮೈಸೂರು ನಗರದ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕ(ಪ್ರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿನ ನಜರ್ ಬಾದ್/ಲಷ್ಕರ್ ಮೊಹಲ್ಲಾ ವ್ಯಾಪ್ತಿಯ ಸಿ ಬ್ಲಾಕ್ ಗೌಸಿಯಾ ನಗರದಲ್ಲಿ ಪ್ರಸ್ತುತ ನೂತನವಾಗಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಸಂಘ ಸಂಸ್ಥೆಗಳಿಂದ ಅರ್ಜಿಯನ್ನು ಸ್ವೀಕಾರ ಪ್ರಾರಂಭಿಸಲಾಗಿದ್ದು, ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಮತ್ತು ಆಸಕ್ತ ಸಂಘ ಸಂಸ್ಥೆಗಳ ಅಭ್ಯರ್ಥಿಗಳು ಅ.29 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಅಕ್ಟೋಬರ್ 08, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 29, 2025

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು;

ಹೊಸ ನ್ಯಾಯಬೆಲೆ ಅಂಗಡಿಯನ್ನು ಪ್ರಾರಂಭಿಸಲು ಅರ್ಹ ನೊಂದಾಯಿತ ವಿವಿದೋದ್ದೇಶ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಮಹಿಳಾ ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ವಿಕಲಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ, ಆದಿವಾಸಿ ವಿವಿದ್ದೋದ್ದೇಶ ಸಹಕಾರ ಸಂಘಗಳು (ಇತರ ನೊಂದಾಯಿತ ಸಹಕಾರ ಸಂಘಗಳು) ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;

ಅರ್ಜಿ ಸಲ್ಲಿಸಲು ಇಚ್ಚಿಸುವ ನೋಂದಾಯಿತ ಸಂಘ ಸಂಸ್ಥೆಗಳ ಅಭ್ಯರ್ಥಿಗಳು “ಜಂಟಿ ನಿರ್ದೇಶಕರ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕೊಠಡಿ ಸಂಖ್ಯೆ: 226, 2ನೇ ಮಹಡಿ, ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ, ಸಿದ್ಧಾರ್ಥನಗರ, ಮೈಸೂರು: 570011 ಈ ವಿಳಾಸದಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು.

ಅರ್ಜಿಯಲ್ಲಿ ಕೇಳಲಾಗುವ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಲಗತ್ತಿಸಿ. ಅಕ್ಟೋಬರ್ 29ರ ಸಂಜೆ 5.30 ರೊಳಗೆ (ಸದರಿ ದಿನವು ಸರ್ಕಾರಿ ರಜಾ ದಿನವಾದಲ್ಲಿ) ನಂತರದ ಕಚೇರಿ ಕರ್ತವ್ಯದ ದಿನದ ಸಂಜೆ 5.30 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಮೈಸೂರು ಜಿಲ್ಲೆ ಆಹಾರ ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Important Direct Links:

Official Websiteahara.karnataka.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

17 thoughts on “ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ”

  1. ಸರ್ ಅನೂರ್ ಅಲ್ಲಿ ನ್ಯಾಯಬೆಲೆ ಅಂಗಡಿ ಕೊಡ್ತೀರಾ ಸರ್? ತುಂಬಾ ಪಬ್ಲಿಕ್ ತೊಂದರೆ ಆಗ್ತಾ ಇದೆ ಎಂಎಂಎಸ್ ರೋಡ್ ಆರ್ ಎಸ್ ದೊಡ್ಡಿ ಜನಗಳು 2ನೆಯ ಬೆಲೆ ಅಂಗಡಿಗೆ ಆ ತಾಲೂಕ್ ಇರೋದು ಅಲ್ಲಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಮತ್ತೆ ಸರ್ವರ್ ಇಲ್ಲ ಅಂತ ತುಂಬಾ ಅಡೆತಡೆಗಳು ನ್ಯಾಯ ಬೆಲೆ ಅಂಗಡಿ ಕೊಡ್ತೀರಾ

    Reply

Leave a Comment