ಭಾರತೀಯ ಸೇನೆಯು 2024 ರಲ್ಲಿ ನೇರ ನೇಮಕಾತಿ ಹವಾಲ್ದಾರ್ ಮತ್ತು ನಾಯ್ಬ್ ಸುಬೇದಾರ್ (ಕ್ರೀಡಾ) ಹುದ್ದೆಗಳಿಗೆ ನೇಮಕಾತಿ ಅತಿ ಸೂಚನೆಯನ್ನು ಬಿಡುಗಡೆ ಮಾಡಿದೆ. ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ತೋರಿದ ಯುವಕರು ಈ ಯೋಜನೆಯ ಮೂಲಕ ಸೇನೆಯಲ್ಲಿ ಸೇರಬಹುದು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಸುವರ್ಣ ಅವಕಾಶವಾಗಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಯುವಕ ಯುವತಿಯರು ತಮ್ಮ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
Army Sports Quota Vacancy 2024
ಭಾರತೀಯ ಸೈನ್ಯವು ಹವಾಲ್ದಾರ್/ ನೈಬ್ ಸುಬೇದಾರ್ (ಕ್ರೀಡೆ) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕ್ರೀಡಾ ಸಾಧನದ ಮೇಲೆ ಶರ್ಟ್ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿ ದೈಹಿಕ ಮತ್ತು ಶಾರೀರಿಕ ಪರೀಕ್ಷೆಗೆ ಕರೆಯಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.