ಮುಂಬೈ: ಬ್ಯಾಂಕ್ ಆಫ್ ಬರೋಡಾ(ಬಿಒಬಿ) ತನ್ನ ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸಸ್ ಮತ್ತು ಕಾರ್ಪೊರೇಟ್ ಅಂಡ್ ಇನ್ಟಿಟ್ಯೂಷನಲ್ ಕ್ರೆಡಿಟ್ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.
ವೆಲ್ತ್ ಎಕ್ಸಿಕ್ಯೂಟಿವ್ 1000 ಸ್ಥಾನ, ಕ್ರೆಡಿಟ್ ಅನಲಿಸ್ಟ್ 100 ಸ್ಥಾನ ಸೇರಿದಂತೆ ಒಟ್ಟು 1100 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ https://bankofbaroda.bank.in/career/current-opportunitiesದ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಸೆಪ್ಟೆಂಬರ್ 04
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ(ವಿಸ್ತರಣೆ)- ಅಕ್ಟೋಬರ್ 01(ಮಧ್ಯರಾತ್ರಿವರೆಗೆ)
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ವೆಲ್ತ್ ಎಕ್ಸಿಕ್ಯೂಟಿವ್ (ಜೆಎಂಜಿ/ಎಸ್-ಐ) ಹುದ್ದೆಗೆ; ಯಾವುದೇ ವಿಷಯದಲ್ಲಿ ಪದವಿ(Graduation) ಹೊಂದಿರಬೇಕು.
ಇದರೊಂದಿಗೆ ಕೆಳಗಿನ ಯಾವುದಾದರೂ ಒಂದು ಮಾನ್ಯತೆ ಪಡೆದ ಪ್ರಮಾಣಪತ್ರ ಹೊಂದಿರಬೇಕು: ಇನ್ಶೂರೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಐಸಿ 38/ಎನ್‌ಐಎಸ್‌ಎಂ ಸರಣಿ ವಿಎ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಪ್ರಮಾಣಪತ್ರ, ಎನ್‌ಐಎಸ್‌ಎಂ ಸರಣಿ ಎಕ್ಸ್‌ಎಕ್ಸ್‌ಐ-ಎ: ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್ ಸರ್ವಿಸಸ್(ಪಿಎಂಎಸ್) ಡಿಸ್ಟ್ರಿಬ್ಯೂಟರ್ಸ್ ಪ್ರಮಾಣಪತ್ರ, ಎನ್‌ಐಎಸ್‌ಎಂ ಸರಣಿ ವಿ-ಡಿ: ಮ್ಯೂಚುವಲ್ ಫಂಡ್ – ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಪ್ರಮಾಣಪತ್ರ.
ಅನುಭವ: ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು, ಬ್ರೋಕಿಂಗ್ ಅಥವಾ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ವೆಲ್ತ್ ಉತ್ಪನ್ನಗಳ ಮಾರಾಟದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ಆದ್ಯತೆ: ಮ್ಯಾನೇಜ್‌ಮೆಂಟ್‌ನಲ್ಲಿ 2 ವರ್ಷಗಳ ಪೂರ್ಣಾವಧಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಅಥವಾ ಎಂಬಿಎ(ಫೈನಾನ್ಸ್/ಮಾರ್ಕೆಟಿಂಗ್/ಬ್ಯಾಂಕಿಂಗ್) ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಕ್ರೆಡಿಟ್ ಅನಲಿಸ್ಟ್(ಎಂಎಂಜಿ/ಎಸ್-II) ಹುದ್ದೆಗೆ; ಯಾವುದೇ ವಿಷಯದಲ್ಲಿ ಪದವಿ (Graduation) ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ (CA) ಅರ್ಹತೆ ಹೊಂದಿರಬೇಕು.
ಅನುಭವ: ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಕನಿಷ್ಠ 1 ವರ್ಷದ ಬ್ಯಾಂಕಿಂಗ್ ಅನುಭವ ಹೊಂದಿರಬೇಕು. ಕಾರ್ಪೊರೇಟ್ ಕ್ರೆಡಿಟ್ ವಿಭಾಗದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:
01.09.2026 ಕ್ಕೆ ಅನ್ವಯಿಸುವಂತೆ;
ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ- ಕನಿಷ್ಠ 22 ವರ್ಷಗಳು ಮತ್ತು ಗರಿಷ್ಠ 32 ವರ್ಷಗಳು.
ಕ್ರೆಡಿಟ್ ಅನಲಿಸ್ಟ್ ಹುದ್ದೆಗೆ- ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 33 ವರ್ಷಗಳು.
ವಯೋಮಿತಿ ಸಡಿಲಿಕೆ (ಗರಿಷ್ಠ ವಯೋಮಿತಿಯಲ್ಲಿ): ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು. ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು. ವಿಕಲಚೇತನ ಅಭ್ಯರ್ಥಿಗಳಿಗೆ ಸಾಮಾನ್ಯ/ಇಡಬ್ಲ್ಯೂಎಸ್ಗೆ 10 ವರ್ಷಗಳು, ಒಬಿಸಿ ಗೆ 13 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿಗೆ 15 ವರ್ಷಗಳು. ಮಾಜಿ ಸೈನಿಕರು ಮತ್ತು ಕಮಿಷನ್ಡ್ ಅಧಿಕಾರಿಗಳಿಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಆನ್‌ಲೈನ್ ಪರೀಕ್ಷೆ(ಒಟಿ)
- ಸೈಕೋಮೆಟ್ರಿಕ್ ಪರೀಕ್ಷೆ
- ಗುಂಪು ಚರ್ಚೆ(ಜಿಡಿ) ಮತ್ತು ವೈಯಕ್ತಿಕ ಸಂದರ್ಶನ(ಪಿಐ)
ಸಂಬಳ:
ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ; ರೂ.48,480 ರಿಂದ ಆರಂಭಗೊಂಡು ವಿವಿಧ ಹಂತಗಳ ವೇತನ ಶ್ರೇಣಿಯೊಂದಿಗೆ ರೂ.85,920ವರೆಗೆ ಇರುತ್ತದೆ.
ಕ್ರೆಡಿಟ್ ಅನಲಿಸ್ಟ್ ಹುದ್ದೆಗೆ; ರೂ.64,820 ರಿಂದ ಆರಂಭಗೊಂಡು ವಿವಿಧ ಹಂತಗಳ ವೇತನ ಶ್ರೇಣಿಯೊಂದಿಗೆ ರೂ.93,960 ವರೆಗೆ ಇರುತ್ತದೆ.
ಜೊತೆಗೆ ಬ್ಯಾಂಕಿನ ನಿಯಮಗಳಿಗೆ ಅನುಸಾರ ಭತ್ಯೆಗಳು ಹಾಗೂ ಇತರ ಸೌಲಭ್ಯಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕ:
ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ.
- ಸಾಮಾನ್ಯ ವರ್ಗ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.850/-
- ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 175/-
ಅರ್ಜಿ ಸಲ್ಲಿಕೆ ಹೀಗೆ…
ಬ್ಯಾಂಕಿನ ಅಧಿಕೃತ ಜಾಲತಾಣದಲ್ಲಿ “Career” ವಿಭಾಗದ “Current Opportunities” ಉಪವಿಭಾಗದಡಿ ನೀಡಲಾಡ “Recruitment of professionals on regular basis for Corporate & Institutional Credit Department – BOB/HRM/REC/ADVT/2026/17” ಅಥವಾ “Recruitment of professionals on regular basis for Wealth Management Services Department – BOB/HRM/REC/ADVT/2026/17” ಶೀರ್ಷಿಕೆಯಡಿ ನೀಡಲಾಗಿರುವ “Apply Now” ಎಂಬ ಬಟನ್ ಮೇಲೆ ಕ್ಲಿಕ್ಕಿಸಿ.
ನಂತರ ಹೊಸಪುಟ ತೆರೆಯುತ್ತದೆ. ಅಲ್ಲಿ ಹೊಸ ಬಳಕೆದಾರರಾಗಿ ನೋಂದಣಿಯಾಗಿ. ಅರ್ಜಿ ನಮೂನೆಯನ್ನು ತುಂಬಿ, ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಮುಖ್ಯ ಲಿಂಕ್‌ಗಳು:
| ಆನ್‌ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯ ಪ್ರಕಟಣೆ ಪಿಡಿಎಫ್ ಲಿಂಕ್(Dated on 17/09/2026) | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | bankofbaroda.bank.in |
| ಮತ್ತಷ್ಟು ಸುದ್ದಿಗಾಗಿ | ಕರ್ನಾಟಕಹೆಲ್ಪ್.ಇನ್ |
Jab