ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್‌ಎಎಸ್‌ಟಿ) ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ನೇರಸಂದರ್ಶನವು ಸೆ.11ರಂದು ನಡೆಯಲಿದೆ. ಹಿರಿಯ ಕಾರ್ಯನಿರ್ವಾಹಕ ವೈದ್ಯರು 11 ಹುದ್ದೆ, ಕಾರ್ಯನಿರ್ವಾಹಕ ವೈದ್ಯ(ಕ್ಲೈಮ್ಸ್) 02 ಹುದ್ದೆ, ಪ್ರಾದೇಶಿಕ ಸಲಹೆಗಾರ 01 ಹುದ್ದೆ, ತಂಡದ ಮುಖ್ಯಸ್ಥ-ವೈದ್ಯ 01 ಹುದ್ದೆ ಹಾಗೂ ದತ್ತಾಂಶ ವಿಶ್ಲೇಷಕ 01 ಹುದ್ದೆಗೆ ಗುತ್ತಿಗೆ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ(ಅಗತ್ಯಕ್ಕನುಗುಣವಾಗಿ ವಿಸ್ತರಿಸಬಹುದಾಗಿದೆ).
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಹೊರಡಿಸಿದ ದಿನಾಂಕ ಸೆಪ್ಟೆಂಬರ 04
- ನೇರ ಸಂದರ್ಶನ ನಡೆಯುವ ದಿನಾಂಕ ಸೆಪ್ಟೆಂಬರ್ 11
- ಅಭ್ಯರ್ಥಿಗಳ ನೋಂದಣಿ ಸಮಯ- ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ (12.30ರ ನಂತರ ನೋಂದಣಿಗೆ ಅವಕಾಶವಿರುವುದಿಲ್ಲ)
- ಕಂಪ್ಯೂಟರ್ ಪರೀಕ್ಷೆಯ ಸಮಯ- ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 01.30 ರವರೆಗೆ
- ಸಂದರ್ಶನದ ಅವಧಿ- ಮಧ್ಯಾಹ್ನ 02.30 ರಿಂದ ಸಂಜೆ 05.30 ರವರೆಗೆ
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
| ಹುದ್ದೆಯ ಹೆಸರು | ಶೈಕ್ಷಣಿಕ ಅರ್ಹತೆ ಮತ್ತು ಅನುಭವ | ವಯೋಮಿತಿ |
|---|---|---|
| ಹಿರಿಯ ಕಾರ್ಯನಿರ್ವಾಹಕ ವೈದ್ಯರು | • ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಮತ್ತು ಕ್ಲಿನಿಕಲ್/ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಅಥವಾ • ಎಂಬಿಬಿಎಸ್ ಮತ್ತು ಕ್ಲಿನಿಕಲ್/ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ. • ಕಂಪ್ಯೂಟರ್ ಜ್ಞಾನ ಕಡ್ಡಾಯ. | 65 ವರ್ಷ |
| ಕಾರ್ಯನಿರ್ವಾಹಕ ವೈದ್ಯರು(ಕ್ಲೈಮ್ಸ್) | •ಎಂಬಿಬಿಎಸ್ ಅಥವಾ ಬಿಡಿಎಸ್ ಪದವಿ. • ವೈದ್ಯಕೀಯ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಮತ್ತು ತಂಡವನ್ನು ಮುನ್ನಡೆಸುವ ಗುಣ ಹೊಂದಿರಬೇಕು. • ಕಂಪ್ಯೂಟರ್ ಜ್ಞಾನ ಕಡ್ಡಾಯ. | 65 ವರ್ಷ |
| ಪ್ರಾದೇಶಿಕ ಸಲಹೆಗಾರ(ಮೈಸೂರು ವಿಭಾಗ) | • ಎಂಬಿಬಿಎಸ್ ಪದವಿ. • ವೈದ್ಯಕೀಯ ಕ್ಷೇತ್ರ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ. • ಕಂಪ್ಯೂಟರ್ ಜ್ಞಾನ ಕಡ್ಡಾಯ. | 55 ವರ್ಷ |
| ತಂಡದ ಮುಖ್ಯಸ್ಥ -ವೈದ್ಯರು(ಕೆಎಎಸ್‌ಎಸ್ ಯೋಜನೆ) | • ಎಂಬಿಬಿಎಸ್ ಪದವಿ. • ಕ್ಲಿನಿಕಲ್/ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ. • ಕಂಪ್ಯೂಟರ್ ಜ್ಞಾನ ಕಡ್ಡಾಯ. | 65 ವರ್ಷ |
| ದತ್ತಾಂಶ ವಿಶ್ಲೇಷಕರು (ಎಮ್&ಇ) | • ಸಾಂಖ್ಯಿಕ ಶಾಸ್ತ್ರ(Statistics) ಕಡ್ಡಾಯ ವಿಷಯವಾಗಿರುವಂತೆ ಸಾಂಖ್ಯಿಕ ಶಾಸ್ತ್ರ/ಅರ್ಥಶಾಸ್ತ್ರ/ದತ್ತಾಂಶ ವಿಶ್ಲೇಷಣೆ (Data Analysis) ಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ. • ಸಾಂಖ್ಯಿಕ ವಿಶ್ಲೇಷಣೆ ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನದಲ್ಲಿ ಕನಿಷ್ಠ 7 ವರ್ಷಗಳ ಅನುಭವ. | 60 ವರ್ಷ |
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಮತ್ತು ರೋಸ್ಟರ್ ಆಧಾರ: ಅಭ್ಯರ್ಥಿಗಳನ್ನು ರೋಸ್ಟರ್ ಹಾಗೂ ಟ್ರಸ್ಟ್‌ನ ನಿಯಮಾವಳಿಗಳ ಪ್ರಕಾರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
- ಕಂಪ್ಯೂಟರ್ ಪರೀಕ್ಷೆ: ಸಂದರ್ಶನದ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ (ಲಿಖಿತ/ಪ್ರಾಯೋಗಿಕ) ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಕನ್ನಡ ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ಸಂಬಳ:
• ಹಿರಿಯ ಕಾರ್ಯನಿರ್ವಾಹಕ ವೈದ್ಯರು; ರೂ.65,000/-(ಪ್ರತಿ ತಿಂಗಳು ರೂ.10,000/- ಪ್ರಯಾಣ ಭತ್ಯೆ ಹೆಚ್ಚುವರಿಯಾಗಿ ನೀಡಲಾಗುವುದು).
• ಕಾರ್ಯನಿರ್ವಾಹಕ ವೈದ್ಯರು(ಕ್ಲೈಮ್ಸ್) ಹುದ್ದೆಗೆ; ಎಂಬಿಬಿಎಸ್ ಅಭ್ಯರ್ಥಿಗಳಿಗೆ ರೂ.50,000/- ಹಾಗೂ ಬಿಡಿಎಸ್ ಅಭ್ಯರ್ಥಿಗಳಿಗೆ ರೂ.45,000/-. (ಪ್ರತಿ ತಿಂಗಳು ರೂ.10,000/- ಪ್ರಯಾಣ ಭತ್ಯೆ ಹೆಚ್ಚುವರಿಯಾಗಿ ನೀಡಲಾಗುವುದು)
• ಪ್ರಾದೇಶಿಕ ಸಲಹೆಗಾರ ಹುದ್ದೆಗೆ; ರೂ.60,000/- (ವಾಹನ ಸೌಲಭ್ಯವನ್ನು ಒದಗಿಸಲಾಗುವುದು).
• ತಂಡದ ಮುಖ್ಯಸ್ಥ-ವೈದ್ಯ ಹುದ್ದೆಗೆ; ರೂ.70,000/-
• ದತ್ತಾಂಶ ವಿಶ್ಲೇಷಕ ಹುದ್ದೆಗೆ; ರೂ.60,000/- (ಪ್ರತಿ ತಿಂಗಳು ರೂ.10,000/- ಪ್ರಯಾಣ ಭತ್ಯೆ ಹೆಚ್ಚುವರಿಯಾಗಿ ನೀಡಲಾಗುವುದು).
ಅರ್ಜಿ ಶುಲ್ಕ:
ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರೀತಿಯ ಅರ್ಜಿ ಶುಲ್ಕದ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೇಖಿಸಿಲ್ಲ.
ಸಂದರ್ಶನ ನಡೆಯುವ ಸ್ಥಳ:
ಆಸಕ್ತ ಅರ್ಹ ಅಭ್ಯರ್ಥಿಗಳು, ಇಲಾಖೆಯ ಅಧಿಕೃತ ವೆಬ್‌ಸೈಟ್ https://sast.karnataka.gov.in/sast/ಮೂಲಕ ನಿಗದಿತ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿ, ಸ್ವಯಂ ವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯಸೌಧ, 7ನೇ ಮಹಡಿ, ಬೆಂಗಳೂರು-560023 ಇಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಲು ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ಅಧಿಸೂಚನೆಯಲ್ಲಿ ಸೂಚಿಸಿದ್ದಾರೆ.
ಮುಖ್ಯ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅರ್ಜಿ ನಮೂನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | sast.karnataka.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |