ನವದೆಹಲಿ ಸೆ.07: ಸಿಬ್ಬಂದಿ ನೇಮಕಾತಿ ಆಯೋಗವು(ಎಸ್‌ಎಸ್‌ಸಿ) ವಿವಿಧ ಹುದ್ದೆಗಳ ಭರ್ತಿಗಾಗಿ 2026ನೇ ಸಾಲಿನ ‘ಕಂಬೈನ್ಡ್ ಹೈಯರ್ ಸೆಕೆಂಡರಿ(10+2) ಲೆವೆಲ್ ಎಕ್ಸಾಮಿನೇಷನ್'(ಸಿಹೆಚ್‌ಎಸ್‌ಎಲ್) ಅಧಿಸೂಚನೆಯನ್ನು ಪ್ರಕಟಿಸಿದೆ.
ಈ ಪರೀಕ್ಷೆಯ ಮೂಲಕ ಲೋವರ್ ಡಿವಿಷನ್ ಕ್ಲರ್ಕ್/ಜೂನಿಯರ್ ಸೆಕ್ರೆಟಿಯೇಟ್ ಮತ್ತು ಇತರ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಸುಮಾರು 2,536 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಯಾ ಹುದ್ದೆಗೆ ಅನುಗುಣವಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಳ್ಳಲು ಅರ್ಹರು. ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ಜಾಲತಾಣ ಮೂಲಕ ಅ.07ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- ಸೆಪ್ಟೆಂಬರ್ 07
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 07 (ರಾತ್ರಿ 11:00 ಗಂಟೆ)
- ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ- ಅಕ್ಟೋಬರ್ 08
- ಅರ್ಜಿ ತಿದ್ದುಪಡಿ(Correction Window) ವಿಂಡೋ ತೆರೆಯುವ ದಿನಗಳು- ಅಕ್ಟೋಬರ್ 14 ರಿಂದ 16ರವರೆಗೆ.
ಶೈಕ್ಷಣಿಕ ಅರ್ಹತೆ:
ಡಾಟಾ ಎಂಟ್ರಿ ಆಪರೇಟರ್/ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ‘ಎ (ಗ್ರಾಹಕ ವ್ಯವಹಾರಗಳು, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಸಂಸ್ಕೃತಿ ಸಚಿವಾಲಯ) ಹುದ್ದೆಗಳಿಗೆ; ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಲೋವರ್ ಡಿವಿಷನ್ ಕ್ಲರ್ಕ್/ಜೂನಿಯರ್ ಸೆಕ್ರೆಟಿಯೇಟ್ ಅಸಿಸ್ಟಂಟ್ ಮತ್ತು ಇತರ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ; ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಅಭ್ಯರ್ಥಿಗಳು 01-08-2026ರ ಅನ್ವಯ 18 ರಿಂದ 27 ವರ್ಷದೊಳಗಿರಬೇಕು (ಅಂದರೆ 02-08-1999 ಕ್ಕಿಂತ ಮುಂಚೆ ಮತ್ತು 01-08-2008 ರ ನಂತರ ಜನಿಸಿರಬಾರದು).
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ-I
- ಕಂಪ್ಯೂಟರ್ ಆಧಾರಿತ ಪರೀಕ್ಷೆ-II
- ದಾಖಲಾತಿ ಪರಿಶೀಲನೆ
ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಕೌಶಲ್ಯ ಪರೀಕ್ಷೆ/ಟೈಪಿಂಗ್ ಪರೀಕ್ಷೆ, ಕಂಪ್ಯೂಟರ್ ಜ್ಞಾನದ ಪರೀಕ್ಷೆಗಳನ್ನು ಒಳಗೊಂಡಿದೆ.
ಸಂಬಳದ ವಿವರ:
ಲೋವರ್ ಡಿವಿಷನ್ ಕ್ಲರ್ಕ್/ಜೂನಿಯರ್ ಸೆಕ್ರೆಟರಿಯೇಟ್ ಹುದ್ದೆಗೆ ರೂ.19,900 – 63,200/-(ಪೇ ಲೆವೆಲ್-2ರಂತೆ)
ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ರೂ.25,500 – 81,100/-(ಪೇ ಲೆವೆಲ್-4) ಮತ್ತು ರೂ.29,200 – 92,300/-( ಲೆವೆಲ್-5).
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ‘ಎ’ ಹುದ್ದೆಗೆ ರೂ. 25,500 – 81,100/-(ಪೇ ಲೆವೆಲ್-4)
ಅರ್ಜಿ ಶುಲ್ಕ:
ಮಹಿಳಾ ಅಭ್ಯರ್ಥಿಗಳು, ಎಸ್‌ಎಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಉಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100/- ಇರಲಿದೆ.
ಅರ್ಜಿ ಸಲ್ಲಿಕೆಯ ಹಂತ-ಹಂತದ ಪ್ರಕ್ರಿಯೆ…
ಕ್ರಿಯೆ-1 ಅಭ್ಯರ್ಥಿಗಳು ಮೊದಲು OTR ಪೂರ್ಣಗೊಳಿಸಬೇಕು ನಂತರ, ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.
ಕ್ರಿಯೆ-2 ನಂತರ ‘Latest Notifications’ ಟ್ಯಾಬ್ ಅಡಿಯಲ್ಲಿರುವ ‘Combined Higher Secondary (10+2) Level Examination 2026’ ವಿಭಾಗದಲ್ಲಿ ‘Apply’ ಲಿಂಕ್ ಕ್ಲಿಕ್ ಮಾಡಬೇಕು.
ಕ್ರಿಯೆ-3ತದನಂತರ ಅರ್ಜಿ ನಮೂನೆ ತೆರೆಯುತ್ತದೆ. ತಾವು ಸರಿಯಾಗಿ ಎಲ್ಲಾ ಮಾಹಿತಿ ತುಂಬಿ ಹಾಗೂ ಅಗತ್ಯವಾಗಿ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆ ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ(ಟೋಲ್ ಫ್ರೀ) 18003093063ಗೆ ಸಂಪರ್ಕಿಸಬಹುದು ಎಂದು ಅಧಿಸೂಚನೆಯಲ್ಲಿ ಕೋರಲಾಗಿದೆ.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | https://ssc.gov.in/ |
| ಮತ್ತಷ್ಟು ಸುದ್ದಿಗಳಿಗಾಗಿ–> | ಕರ್ನಾಟಕಹೆಲ್ಪ್.ಇನ್ |